Advertisement

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

11:25 PM Mar 06, 2024 | Team Udayavani |

ಬೆಂಗಳೂರು: ಆನ್ ಲೈನ್ ಮಾರುಕಟ್ಟೆ ತಾಣ ಫ್ಲಿಪ್ಕಾರ್ಟ್ ತನ್ನ UPI ಹ್ಯಾಂಡಲ್ ಅನ್ನು ಪರಿಚಯಿಸಿದ್ದು, ಫ್ಲಿಪ್ಕಾರ್ಟ್ ನ 500+ ದಶಲಕ್ಷ ಗ್ರಾಹಕರೂ ಸೇರಿದಂತೆ ಎಲ್ಲಾ ಬಳಕೆದಾರರಿಗೂ ಈ ಸೌಲಭ್ಯ ದೊರಕಲಿದೆ.

Advertisement

UPI ಬಳಕೆದಾರರಿಗೆ ಬಳಿಕ ಸೂಪರ್ ಕಾಯಿನ್ಗಳು, ಕ್ಯಾಶ್ಬ್ಯಾಕ್, ಮೈಲ್ಸ್ಟೋನ್ ಪ್ರಯೋಜನಗಳು ಮತ್ತು ಬ್ರ್ಯಾಂಡ್ ವೋಚರ್ ಮುಂತಾದ ಲಾಯಲ್ಟಿ ವೈಶಿಷ್ಟ್ಯಗಳು ಲಭ್ಯವಿರುತ್ತವೆ. ಆಕ್ಸಿಸ್ ಬ್ಯಾಂಕ್ ಚಾಲಿತ ಫ್ಲಿಪ್ಕಾರ್ಟ್ UPI ಆರಂಭದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರುತ್ತದೆ. ಗ್ರಾಹಕರು ಈಗ @fkaxis ಹ್ಯಾಂಡಲ್ ಮೂಲಕ UPI ಗೆ ನೋಂದಾಯಿಸಿಕೊಳ್ಳಬಹುದು ಮತ್ತು ಫ್ಲಿಪ್ಕಾರ್ಟ್ ಆ್ಯಪ್ ಬಳಸಿ ಹಣ ವರ್ಗಾವಣೆ ಮತ್ತು ಚೆಕ್ಔಟ್ ಪಾವತಿಗಳನ್ನು ಮಾಡಬಹುದು.

UPI ಆದ್ಯತೆಯ ಪಾವತಿ ಆಯ್ಕೆಯಾಗುತ್ತಿದ್ದು, ಫ್ಲಿಪ್ಕಾರ್ಟ್ ಮಾರುಕಟ್ಟೆಯ ಒಳಗೆ ಮತ್ತು ಹೊರಗೆ ಆನ್ಲೈನ್ ಮತ್ತು ಆಫ್ಲೈನ್ ವ್ಯಾಪಾರಿ ವಹಿವಾಟುಗಳನ್ನು ನಡೆಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಒಂದು ಕ್ಲಿಕ್ನಲ್ಲಿ ರೀಚಾರ್ಜ್ಗಳು ಮತ್ತು ಬಿಲ್ ಪಾವತಿಗಳನ್ನು ಮಾಡಬಹುದು.

ಫ್ಲಿಪ್ಕಾರ್ಟ್ ನ ಫಿನ್ಟೆಕ್ ಮತ್ತು ಪೇಮೆಂಟ್ಸ್ ಗ್ರೂಪ್ನ ಹಿರಿಯ ಉಪಾಧ್ಯಕ್ಷ ಧೀರಜ್ ಅನೆಜಾ, ಫ್ಲಿಪ್ಕಾರ್ಟ್ನಲ್ಲಿ, ವ್ಯಾಪಕ ಶ್ರೇಣಿಯ ರಿವಾರ್ಡ್ಗಳು, ಸೂಪರ್ ಕಾಯಿನ್ಗಳು, ಬ್ರಾಂಡ್ ವೋಚರ್ಗಳು ಮುಂತಾದ ಪ್ರಯೋಜನಗಳ ಜೊತೆಗೆ ಸುರಕ್ಷಿತ ಮತ್ತು ಅನುಕೂಲಕರ ಪಾವತಿ ಆಯ್ಕೆಗಳನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next