Advertisement

ರಸ್ತೆ ಕಾಮಗಾರಿಗೆ ಚಾಲನೆ

07:29 AM Jul 01, 2020 | Lakshmi GovindaRaj |

ಹೊಸಕೋಟೆ: ಸಾಮಾಜಿಕ ಸ್ವಸ್ಥತೆ ಕಾಪಾಡುವಲ್ಲಿ ದೇವಾಲಯಗಳು ಪ್ರಮುಖ ಪಾತ್ರ ವಹಿಸುತ್ತಿದ್ದು ಅಭಿವೃದ್ಧಿಗೆ ಸಹಕರಿಸ ಬೇಕು ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು. ತಾಲೂಕಿನ ಹರಳೂರು ಗ್ರಾಮದ ಬಳಿ ಇರುವ  ಸಪ್ತಮಾತೃಕೆಯರ ದೇವಾಲಯಕ್ಕೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

Advertisement

ದೇವಾಲಯ ಎತ್ತರದ ಪ್ರದೇಶದಲ್ಲಿದ್ದು ಅಂದಾಜು 30-35 ಲಕ್ಷ ರೂ.ಗಳ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಹಾಗೂ ಬದಿಯಲ್ಲಿ  ನೀರು ಹರಿಯಲು ಕಾಲುವೆ ನಿರ್ಮಾಣ ಕಾಮಗಾರಿಕೈಗೊಳ್ಳಲುಯೋಜಿಸಲಾಗಿದ್ದು ತಮ್ಮ ಅನುದಾನದೊಂದಿಗೆ ಸೂಕ್ತ ಹಣ ಬಿಡುಗಡೆ ಮಾಡಲಾಗುವುದು. ಇದರೊಂದಿಗೆ ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ, ಸದಸ್ಯರಾದ  ಜಯಕುಮಾರಿ ಸೊಣ್ಣಪ್ಪ, ಕೃಷ್ಣಮೂರ್ತಿ, ವೈ.ಎಸ್‌. ಮಂಜುನಾಥ್‌ ವತಿಯಿಂದ ತಲಾ 5 ಲಕ್ಷ ರೂ. ನೀಡಿದ್ದಾರೆ.

ಮುಂದಿನ ಹಂತದಲ್ಲಿ ಮುಖ್ಯ ರಸ್ತೆಯಿಂದ ಕೆಳಗಿನವರೆಗೂ ಡಾಂಬರೀಕರಣ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  ದೇವಾಲಯ ಟ್ರಸ್ಟಿನ ಅಧ್ಯಕ್ಷ ಎಂ.ಸಿ.ನರೇಂದ್ರ ಮಾತನಾಡಿ, 4 ವರ್ಷಗಳ ಹಿಂದೆ ಸುಮಾರು 300 ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯ ಜೀರ್ಣದ್ಧಾರಗೊಳಿಸಿದ್ದು ಸುತ್ತಮುತ್ತಲಿನ ಗ್ರಾಮಗಳಷ್ಟೇ  ಅಲ್ಲದೆ ದೂರದ ಸ್ಥಳಗಳಿಂದಲೂ ಭಕ್ತಾದಿಗಳು ಆಗಮಿಸುತ್ತಿದ್ದಾರೆ.

ಕಲ್ಲು ಮಣ್ಣಿನಿಂದ ಕೂಡಿದ ರಸ್ತೆಯಿಂದಾಗಿ ಮೇಲ್ಭಾಗಕ್ಕೆ ಸಾಗಲು ತೀವ್ರ ತೊಂದರೆಯಾಗುತ್ತಿದ್ದು ಪರಿಹರಿಸಲು ರಸ್ತೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ದೇವಾಲಯ ಟ್ರಸ್ಟಿನ  ಅಶೋಕ್‌ 2 ಲಕ್ಷ ರೂ. ದೇಣಿಗೆ ನೀಡಿದ್ದಾರೆಂದರು. ಜಿಪಂ ಸದಸ್ಯ ವೈ.ಎಸ್‌.ಮಂಜುನಾಥ್‌, ತಾಪಂ ಸದಸ್ಯರಾದ ಡಿ.ಟಿ.ವೆಂಕಟೇಶ್‌, ಮುನಿರಾಜು, ಮುಖಂಡರಾದ ಹನುಮಂತೇಗೌಡ, ಬಿ.ವಿ.ಬೈರೇಗೌಡ, ಸುನಿಲ್‌, ನಂಜುಂಡೇಗೌಡ  ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next