Advertisement

ದೊಡ್ಡಾಲದ ಮರ ಅಭಿವೃದ್ಧಿಗೆ ಚಾಲನೆ

12:15 PM Aug 10, 2018 | Team Udayavani |

ಕೆಂಗೇರಿ: ರಾಜ್ಯ ಪ್ರವಾಸೋದ್ಯಮ ಇಲಾಖೆ ನೀಡುವ ಒಂದು ಕೋಟಿ ರೂ. ವಿಶೇಷ ಅನುದಾನ ಬಳಸಿ ದೊಡ್ಡ ಆಲದಮರ ಪ್ರವಾಸಿ ತಾಣದ ಅಬಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಎಸ್‌.ಟಿ.ಸೋಮಶೇಖರ್‌ ಹೇಳಿದರು.

Advertisement

ಚುಂಚುನಗುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಚ್ಚ ಅರಸಯ್ಯನ ಪಾಳ್ಯ, ಕೇತೋಹಳ್ಳಿಯ ಕಾಂಕ್ರೀಟ್‌ ರಸ್ತೆ ಕಾಮಗಾರಿ ಹಾಗೂ ದೊಡ್ಡ ಆಲದಮರ ಪ್ರದೇಶದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಗಳಿಗೆ ಗುರುವಾರ ಭೂಮಿ ಪೂಜೆ ನೇರವೇರಿಸಿ ಮಾತನಾಡಿ, ಅರಣ್ಯ ಕಾಯಿದೆಗೆ ಧಕ್ಕೆ ಬಾರದ ರೀತಿಯಲ್ಲಿ ಮುಖ್ಯ ಪ್ರವೇಶ ದ್ವಾರವನ್ನು ಸುಂದರವಾಗಿ ನಿರ್ಮಿಸಲಾಗುತ್ತಿದೆ. ಜತೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಆಲದಮರದ ಸುತ್ತ ಒಡಾಡಲು ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ ಎಂದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿಜಯ್‌ಕುಮಾರ್‌, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಇಂಜಿನಿಯರ್‌ ವೆಂಕಟೇಶ್‌, ತಾ.ಪಂ ಸದಸ್ಯರಾದ ವೆಂಕಟಮ್ಮ, ರೇವಣಸಿದ್ದಯ್ಯ, ಲೋಕೇಶ್‌, ಗಂಗರೇವಣ್ಣ, ಶಂಭುಲಿಂಗಯ್ಯ, ಕುಮಾರ್‌, ರಮೇಶ್‌, ಪುಟ್ಟರಾಜು, ರುದ್ರೇಶ್‌, ಸೂಲಿವಾರ ಬಸವರಾಜು, ಚೇತನ್‌, ಮೋಹನ್‌, ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next