ಬೆಂಗಳೂರು: ಸೈಕಲ್ ಪ್ಯೂರ್ ಅಗರಬತ್ತೀಸ್‌ನಿಂದ ಖ್ಯಾತಿ ಹೊಂದಿರುವ ಮೈಸೂರು ಮೂಲದ ಎನ್‌ಆರ್ ಸಮೂಹದ ರಿಪಲ್ ಫ್ರಾಗ್ರೆನ್ಸಸ್, ನಗರದ ಬ್ರೂಕ್‌ಫೀಲ್ಡ್ ಮಾಲ್‌ನಲ್ಲಿ ನೂತನ “ಐರಿಸ್ ಅರೋಮಾ ಬುಟಿಕ್’ಗೆ ಚಾಲನೆ ನೀಡಿದೆ.
ವೈಟ್‌ಫಿಲ್ಡ್‌ನ ಗ್ರಾಹಕರ ಮನೆಯ ಸುಗಂಧ ಮತ್ತು ಅಲಂಕಾರಿಕ ವಸ್ತುಗಳ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಈ ವಿಶೇಷ ಬುಟಿಕ್ ಅನ್ನು ಖ್ಯಾತ ನಟ ರಮೇಶ್ ಅರವಿಂದ್ ಅವರು ಬುಧವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ನಟ ರಮೇಶ್ ಅರವಿಂದ್, “ಈ ಐರಿಸ್ ಅರೋಮಾ ಬುಟಿಕ್ ಒಂದು ಅದ್ಭುತವಾದ ತಾಣವಾಗಿದ್ದು, ಮಧುರ ಭಾವನೆ ಉಂಟುಮಾಡುವ ಹಿತಕರ ವಾತಾವರಣ ಕಲ್ಪಿಸಿದೆ. ರೀಡ್ ಡಿಫ್ಯೂಸರ್‌ಗಳು, ಸುಗಂಧ ಕ್ಯಾಂಡಲ್‌ಗಳು, ಹಲವಾರು ಮನೆ ಅಲಂಕಾರಿಕ ವಸ್ತುಗಳು ಸೇರಿದಂತೆ ಅನೇಕ ಆಯ್ಕೆಗಳು ಇಲ್ಲಿ ಲಭ್ಯವಿವೆ. ಗೃಹಾಲಂಕಾರ ಹಾಗೂ ಸುಗಂಧ ಪ್ರಿಯರಿಗೆ ಅತ್ಯದ್ಭುತ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ’ ಎಂದು ಹೇಳಿದರು.
ರಿಪಲ್ ಫ್ರಾಗ್ರೆನ್ಸೆಸ್‌ನ ವ್ಯವಸ್ಥಾಪಕ ನಿರ್ದೇಶಕ ಕಿರಣ್ ರಂಗ ಅವರು ಮಾತನಾಡಿ, “ನಿಮ್ಮ ಮನೆಯ ಒಳಾಂಗಣದ ಸುವಾಸನೆಯು ನಿಮ್ಮ ಮನೆಯ ಅಲಂಕಾರ ಹಾಗೂ ನಿಮ್ಮ ವೈಯಕ್ತಿಕ ಕ್ಷೇಮದ ಅವಿಭಾಜ್ಯ ಅಂಗವಾಗಿರುತ್ತದೆ. ಈ ಭಾಗದ ನಮ್ಮ ಗ್ರಾಹಕರ ಅನುಕೂಲಕ್ಕಾಗಿ ಒಂದೇ ಸೂರಿನಡಿ ಎಲ್ಲಾ ರೀತಿಯ ಗೃಹೋಪಯೋಗಿ ಸುಗಂಧ ವಸ್ತುಗಳು ಸಿಗುವಂತೆ ಮಾಡುವುದು ನಮ್ಮ ಮುಖ್ಯ ಉದ್ದೇಶ. ಅಲ್ಲದೆ, ವೈಟ್‌ಫಿಲ್ಡ್‌ನ ಗ್ರಾಹಕರಿಗೆ ಸಂಪೂರ್ಣ ಸಂವೇದನಾ ಅನುಭವವನ್ನು ನೀಡಬೇಕೆಂದು ಸಹ ಬಯಸುತ್ತೇವೆ’ ಎಂದರು.
ಈಗಾಗಲೇ ಲ್ಯಾವೆಲ್ಲೆ ರಸ್ತೆ ಮತ್ತು ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿರುವ ಎರಡು ಬುಟಿಕ್‌ಗಳೊಂದಿಗೆ ಇದು ಹೊಸ ಸೇರ್ಪಡೆಯಾಗಿದೆ. ಚೆನ್ನೈ, ಮೈಸೂರು ಮತ್ತು ಪುಣೆ ಸೇರಿದಂತೆ ಒಟ್ಟು 4 ನಗರಗಳಲ್ಲಿ ಐರಿಸ್ ಅರೋಮಾ ಬುಟಿಕ್‌ಗಳಿವೆ. ಸದ್ಯದಲ್ಲೇ ಹೈದರಾಬಾದ್‌ನಲ್ಲಿ ಒಂದು ಬುಟಿಕ್ ತೆರೆಯುವ ಉದ್ದೇಶವಿದೆ. ಈ ಉತ್ಪನ್ನಗಳನ್ನು ಆನ್‌ಲೈನ್ www.cycle.in/brand-iris ಮೂಲಕವೂ ಪಡೆಯಬಹುದಾಗಿದೆ ಎಂದು ವಿವರಿಸಿದರು.