Advertisement

ವೃಕ್ಷದಲ್ಲಿ ದೇವರನ್ನು ಕಾಣುವ ಸಂಕಲ್ಪ ಮಾಡಿ: ಡಾ|ವೀರೇಂದ್ರ ಹೆಗ್ಗಡೆ

11:40 PM Jul 13, 2022 | Team Udayavani |

ಮೈಸೂರು: ವನ್ಯಜೀವಿಗಳು ನಾಡಿಗೆ ಬರದೇ, ಕಾಡಿನಲ್ಲೇ ಉಳಿಯಬೇಕೆಂದರೆ ಮರಗಿಡಗಳನ್ನು ಶಾಶ್ವತವಾಗಿ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.

Advertisement

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪು.ರಾಜೀವ ಸ್ನೇಹ ಬಳಗದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯ ಘಟಿಕೋತ್ಸವ ಭವನದಲ್ಲಿ ಬುಧವಾರ ನಡೆದ 25 ಸಾವಿರ ಸಸಿಗಳನ್ನು ವಿತರಿಸುವ ವನಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೃಕ್ಷದಲ್ಲಿ ಭಗವಂತನನ್ನು ಕಾಣುವ ಸಂಕಲ್ಪವನ್ನು ನಾವು ಮಾಡಬೇಕಿದೆ. ಪರಿಸರ ಪ್ರೇಮಿಗಳು ಪರಿಸರ ರಕ್ಷಕರಾಗಬೇಕಿದೆ. ಮೈಸೂರಿನ ಎಚ್‌.ವಿ. ರಾಜೀವ್‌ ನಮ್ಮೆಲ್ಲರ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ. ಪ್ರಕೃತಿ ಬಗ್ಗೆ ಗಮನಹರಿಸುವಂತೆ ಎಚ್ಚರಿಸಿದ್ದಾರೆ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next