Advertisement
ಶುಕ್ರವಾರ ಬೆಳಗ್ಗೆ 10.42ಕ್ಕೆ ಮೈಸೂರಿನಿಂದ ಹೊರಟ ಮೊದಲ ವಿಮಾನವು 11.22ಕ್ಕೆ ಮಂಗಳೂರಿನಲ್ಲಿ ಬಂದಿಳಿದಿದೆ. ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ “ವಾಟರ್ ಸೆಲ್ಯೂಟ್’ ಮೂಲಕ ಸ್ವಾಗತ ಕೋರಲಾಯಿತು.
Related Articles
ಅಹಮ್ಮದಾಬಾದ್, ಬೆಂಗಳೂರು ಹಾಗೂ ಮುಂಬಯಿ ಮಧ್ಯೆ ಗೋ ಏರ್ ನೂತನ ವಿಮಾನ ಸೇವೆ ಡಿ.24ರಿಂದ ಆರಂಭವಾಗುವ ಸಾಧ್ಯತೆಯಿದೆ.
Advertisement
2 ಅಂಚೆ ಲಕೋಟೆ ಬಿಡುಗಡೆವಿಮಾನ ಸೇವೆ ಆರಂಭವಾದ ಸವಿ ನೆನಪಿಗೆ ಅಂಚೆ ವಿಭಾಗದಿಂದ ಎರಡು ವಿಶೇಷ ಅಂಚೆ ಲಕೋಟೆಯನ್ನು ವಿಮಾನ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಈ ವಿಶೇಷ ಅಂಚೆ ಲಕೋಟೆಗೆ ವಿಮಾನ ಹೊತ್ತ ಅಂಚೆ ಲಕೋಟೆ ಎಂದು ಹೆಸರಿಸಲಾಗಿದೆ. ಈ ಅಂಚೆ ಲಕೋಟೆಯಲ್ಲಿ ಮಂಗಳೂರನ್ನು ಪ್ರತಿನಿಧಿಸುವ ಮುಟ್ಟಾಳೆ, ನೀರುದೋಸೆ,ಯಕ್ಷಗಾನ ಕಲಾವಿದನ ಚಿತ್ರಗಳು ಹಾಗೂ ಮೈಸೂರನ್ನು ಪ್ರತಿಧಿಸುವ ಮೈಸೂರು ಪೇಟಾ, ಮೈಸೂರು ಪಾಕ್, ಡೊಳ್ಳುಕುಣಿತ ಚಿತ್ರಗಳಿವೆ. ಬಿಡುಗಡೆ ಸಮಾರಂಭದಲ್ಲಿ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ, ಮಂಗಳೂರು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿ ಅಶೊತೋಷ್ ಚಂದ್ರ, ಆ್ಯರ್ ಎಲಯನ್ಸ್ ಸಿಇಒ ಹರ್‌ಪ್ರೀತ್ ಸಿಂಗ್, ಏರ್ ಇಂಡಿಯಾ ಲಿ. ಸ್ಟೇಷನ್ ಮ್ಯಾನೇಜರ್ ಪ್ರದೀಪ್ ಮೆನನ್, ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕ ಶ್ರೀನಾಥ್ ಎನ್.ಬಿ. ಇದ್ದರು.