Advertisement

ಬಿಎಸ್‌ಎನ್‌ಎಲ್‌ನಿಂದ ಐಪಿವಿ6 ಸೇವೆ ಆರಂಭ

11:19 PM Sep 07, 2019 | Team Udayavani |

ಬೆಂಗಳೂರು: ಶಿಕ್ಷಕರ ದಿನಾಚರಣೆ ವಿಶೇಷವಾಗಿ ಬಿಎಸ್‌ಎನ್‌ಎಲ್‌ ಅಂತರ್ಜಾಲದಲ್ಲಿ ಹೊಸ ಯುಗ ತರಲು ಐಪಿವಿ6 ಸೇವೆಯನ್ನು ಆರಂಭಿಸಿದೆ. ಮನೆ ಮತ್ತು ಕಚೇರಿಯಲ್ಲಿ ಅನೇಕ ಅಂತರ್ಜಾಲವನ್ನು ವಿವಿಧ ಸಾಧನಗಳ ಮೂಲಕ ಬಳಸುವವರಿಗೆ ಇದು ಅತಿ ಉಪಯೋಗವಾಗಲಿದೆ. ಈ ಎಲ್ಲ ಸಾಧನಗಳಿಗೆ ವಿಶೇಷ ವಿಳಾಸ ಯೋಜನೆಯ ಅಗತ್ಯವಿರುತ್ತದೆ. ಇದಕ್ಕಾಗಿ ಐಪಿವಿ6 ಸೂಕ್ತವಾಗಿದೆ. ಇದು ಹೆಚ್ಚಿನ ಭದ್ರತಾ ಮಟ್ಟವನ್ನು ಹೊಂದಿದೆ.

Advertisement

ಇಂಟರ್‌ನೆಟ್‌ ಆಫ್ ಥಿಂಗ್ಸ್‌ (ಐಒಟಿ) ಮತ್ತು ಇತರ ಅಪ್ಲಿಕೇಷನ್‌ಗಳನ್ನು ಹೆಚ್ಚಿನ ಭದ್ರತಾ ವೈಶಿಷ್ಟéಗಳೊಂದಿಗೆ ನಿಯೋಜಿಸಲು ಬಹಳ ಸಹಾಯಕವಾಗುತ್ತದೆ ಎಂದು ಬಿಎಸ್‌ಎನ್‌ಎಲ್‌ ಪ್ರಕಟಣೆ ತಿಳಿಸಿದೆ. ಈ ಸೇವೆಯನ್ನು ಸೆ.5ರಿಂದ ಬೆಂಗಳೂರಿನಿಂದ ಆರಂಭಿಸಲಾಗಿದೆ. ಮುಂದಿನ ಕೆಲವೇ ವಾರದಲ್ಲಿ ದೇಶಾದ್ಯಂತ ಎಲ್ಲಾ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಬಿಎಸ್‌ಎನ್‌ಎಲ್‌ ಕರ್ನಾಟಕದ ಮುಖ್ಯ ಮಹಾ ವ್ಯವಸ್ಥಾಪಕ ಸುಶೀಲ್‌ ಕುಮಾರ್‌ ಮಿಶ್ರಾ ತಿಳಿಸಿದರು.

ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ಟ್ರಿಪಲ್‌-ಪ್ಲೇ ಸೇವೆಗಳನ್ನು ತರುತ್ತಿದೆ. ಇದರಲ್ಲಿ ವಿಡಿಯೋ ಮನೋರಂಜನೆ, ಸಂಗೀತ, ಇಂಟರ್‌ನೆಟ್‌ ಮತ್ತು ಅನಿಯಮಿತ ಧ್ವನಿ ಕರೆಗಳ ಸೌಲಭ್ಯದೊಂದಿಗೆ ಭಾರತ್‌ ಫೈಬರ್‌ ಅಥವಾ ಕಾಪರ್‌ ಲೈನ್‌ ಬ್ರಾಡ್‌ ಬ್ರ್ಯಾಂಡ್‌ನ‌ ಸಂಪರ್ಕಗಳಲ್ಲಿ ಸೌಲಭ್ಯವಿರುತ್ತದೆ. ಆಂಧ್ರಪ್ರದೇಶ ಸರ್ಕಲ್‌ನಿಂದ ಪೈಲಟ್‌ ಆಧಾರದ ಮೇಲೆ ಈ ಸೇವೆ ಆರಂಭಿಸಲಾಗುತ್ತಿದ್ದು, ವರ್ಷಾಂತ್ಯದ ವೇಳೆಗೆ ದೇಶದ ಇತರ ಭಾಗಗಳಲ್ಲಿ ಇದನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next