Advertisement

Canada: ಕೆನಡಾ ನಾಗರಿಕರಿಗೆ ಇ-ವೀಸಾ ಸೇವೆ ಆರಂಭ

08:09 PM Nov 22, 2023 | Pranav MS |

ನವದೆಹಲಿ: ಭಾರತ-ಕೆನಡಾ ನಡುವಿನ ರಾಜತಾಂತ್ರಿಕ ಸಂಘರ್ಷದ ನಡುವೆಯೇ ಕೆನಡಾ ಪ್ರಜೆಗಳಿಗೆ 2 ತಿಂಗಳಿಂದ ನಿಲ್ಲಿಸಲಾಗಿದ್ದ ಇ-ವೀಸಾ ಸೇವೆಯನ್ನು ಭಾರತ ಸರ್ಕಾರ ಪುನಾರಂಭಿಸಿದೆ. ಇದೀಗ ಕೆನಡಾ ಪ್ರಜೆಗಳು ಮತ್ತೆ ಇ-ವೀಸಾ ಸೇವೆ ಪಡೆಯಬಹುದಾಗಿದೆ ಎಂದು ಬುಧವಾರ ಮೂಲಗಳು ತಿಳಿಸಿವೆ. ಅಲ್ಲಿಗೆ ಪೂರ್ಣಪ್ರಮಾಣದಲ್ಲಿ ಎಲ್ಲ ರೀತಿಯ ವೀಸಾ ಸೇವೆಯೂ ಪುನಾರಂಭಗೊಂಡಿದೆ.

Advertisement

ಖಲಿಸ್ತಾನಿ ಭಯೋತ್ಪಾದಕ ಹದೀìಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಕೈವಾಡವಿದೆ ಎನ್ನುವ ಕೆನಡಾ ಸರ್ಕಾರದ ಆಧಾರರಹಿತ ಆರೋಪಕ್ಕೆ ಭಾರತ ತಿರುಗೇಟು ನೀಡಿತ್ತು. ಈ ಸಂಬಂಧ 2 ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಘರ್ಷವೂ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 21 ರಂದು ವೀಸಾ ಸೇವೆಗಳನ್ನು ನಿರ್ಬಂಧಿಸಲಾಗಿತ್ತು .

ಆದಾಗ್ಯೂ, ವ್ಯಾಪಾರ, ವೈದ್ಯಕೀಯ ವೀಸಾ ಸೇರಿದಂತೆ ನಾಲ್ಕು ಸೇವಾ ವೀಸಾಗಳನ್ನು ಕಳೆದ ತಿಂಗಳು ಪುನಾರಂಭಿಸಲಾಗಿತ್ತು. ಇದೀಗ ಪ್ರವಾಸಿ ವೀಸಾ ಸೇರಿದಂತೆ ಎಲ್ಲಾ ವೀಸಾಗಳ ಇ-ಸೇವೆಗಳನ್ನು ಮತ್ತೆ ಆರಂಭಿಸಲಾಗಿದೆ. ಕೆನಡಾ ಪ್ರಧಾನಮಂತ್ರಿ ಜಸ್ಟಿನ್‌ ಟ್ರಿಡು ಅವರು ನಿಜ್ಜರ್‌ ಹತ್ಯೆ ಬಗ್ಗೆ ನೀಡಿದ್ದ ಹೇಳಿಕೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಪ್ರಸ್ತಾಪವಾಗಿತ್ತು ಆದರೆ, ಈ ವಾದವನ್ನೇ ಭಾರತ ತಳ್ಳಿಹಾಕಿ, ತನಿಖೆಗೆ ನಮ್ಮ ಅಭ್ಯಂತರವಿಲ್ಲ! ಆದರೆ, ಈ ಆರೋಪಕ್ಕೆ ಸಂಬಂಧಿಸಿದಂತೆ ನಿಮ್ಮ ಬಳಿ ಇರುವ ಸಾಕ್ಷ್ಯವೇನು? ಆಧಾರವಿದ್ದಲ್ಲಿ ನಮಗೂ ತೋರಿಸಿ ಎಂದು ಆಗ್ರಹಿಸಿತ್ತು. ಇದೇ ಉದ್ವಿಗ್ನತೆ ಸಂಬಂಧಿಸಿದಂತೆ ರಾಜತಾಂತ್ರಿಕರ ಹಿಂಪಡೆಯುವಿಕೆ ವಿಚಾರವೂ ಪ್ರಸ್ತಾಪವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next