Advertisement

Boat SmartRing: “ಬೋಟ್‌ ಸ್ಮಾರ್ಟ್‌ರಿಂಗ್‌” ಬಿಡುಗಡೆ

07:21 AM Aug 28, 2023 | Team Udayavani |

ಖ್ಯಾತ ಗ್ಯಾಜೆಟ್‌ ತಯಾರಕ ಸಂಸ್ಥೆ ಬೋಟ್‌ ತನ್ನ ಅತ್ಯಾಧುನಿಕ “ಬೋಟ್‌ ಸ್ಮಾರ್ಟ್‌ ರಿಂಗ್‌’ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಸ್ಮಾರ್ಟ್‌ ವಾಚ್‌ಗಳ ಟ್ರೆಂಡ್‌ ನಡುವೆಯೇ, 8,999 ರೂ. ಬೆಲೆಯ ಈ ಸ್ಮಾರ್ಟ್‌ರಿಂಗ್‌ ಗ್ರಾಹಕರ ಗಮನ ಸೆಳೆದಿದೆ.

Advertisement

ಮೊಬೈಲ್‌ಗ‌ಳಲ್ಲಿ ಬೋಟ್‌ ರಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡುವ ಮೂಲಕ ಈ ಉಂಗುರಕ್ಕೆ ಕಮಾಂಡ್‌ ಸೆಟ್ಟಿಂಗ್‌ ಮಾಡಬಹುದಾಗಿದೆ. ಹಾಡುಗಳನ್ನು ಪ್ಲೇ, ಪಾಸ್‌, ಚೇಂಜ್‌ ಮಾಡುವ ಹಾಗೂ ಫೋಟೋಗಳನ್ನು ವೀಕ್ಷಿಸುವ ಫೀಚರ್‌ ಅನ್ನು ಸ್ಮಾರ್ಟ್‌ ರಿಂಗ್‌ ಹೊಂದಿದೆ. ಸೆನ್ಸರ್‌ ಟಚ್‌ ಇರುವ ಈ ರಿಂಗ್‌ ಹಾರ್ಟ್‌ರೇಟ್‌ ಮಾನಿಟರಿಂಗ್‌ ಜತೆಗೆ ಹೆಣ್ಣು ಮಕ್ಕಳಿಗಾಗಿ ಋತುಚಕ್ರದ ದಿನಾಂಕ ನೆನಪಿಸುವ ಫೀಚರ್‌ ಅನ್ನೂ ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next