Advertisement

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

10:47 PM Nov 05, 2024 | Team Udayavani |

ನವದೆಹಲಿ: ಭಾರತ್‌ ಬ್ರ್ಯಾಂಡ್‌ನ‌ಡಿ ರಿಯಾಯಿತಿ ದರದಲ್ಲಿ ಗೋಧಿ ಹಿಟ್ಟು ಮತ್ತು ಅಕ್ಕಿ ಮಾರಾಟ ಮಾರಾಟ ಮಾಡುವ 2ನೇ ಹಂತಕ್ಕೆ ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿದೆ.

Advertisement

ಈ ಯೋಜನೆಯಡಿ ಪ್ರತಿ ಕೆಜಿ ಗೋಧಿ ಹಿಟ್ಟು 30 ರೂ.ಗೆ ಮತ್ತು ಅಕ್ಕಿ 34 ರೂ.ಗೆ ದೊರೆಯಲಿದೆ. ತಲಾ 5, 10 ಕೆಜಿ ಪ್ಯಾಕೆ ಟ್‌ಗಳಲ್ಲಿ ಎನ್‌ಸಿಸಿಎಫ್, ನಫೇಡ್‌, ಇ-ಕಾಮರ್ಸ್‌ ವೇದಿಕೆ ಗಳಲ್ಲಿ ಮಾರಾಟ ಮಾಡಲಾಗುತ್ತದೆ. 2023ರ ಅಕ್ಟೋಬರ್‌ನಿಂದ 2024ರ ಜೂನ್‌ 30ರವ ರೆಗೆ ಮೊದಲ ಹಂತದ ಯೋಜನೆ ಜಾರಿಯಲ್ಲಿತ್ತು.

ಮೊದಲ ಹಂತದಲ್ಲಿ 27.5 ರೂ.ಗೆ ಗೋಧಿ ಹಿಟ್ಟು, 29 ರೂ.ಗೆ ಅಕ್ಕಿ ಮಾರಾಟ ಮಾಡಲಾಗಿದ್ದು ಈ ಬಾರಿ ಪ್ರತಿ ಕೆಜಿಗೆ 2.50 ರೂ.ನಿಂದ 5 ರೂ.ವರೆಗೆ ಬೆಲೆ ಏರಿಸಲಾ ಗಿದೆ. ಈ ಯೋಜನೆಗೆ ಕೇಂದ್ರ ಆಹಾರ ಸಚಿವ ಪ್ರಹ್ಲಾದ್‌ ಜೋಶಿ ಹಸಿರು ನಿಶಾನೆ ತೋರಿದರು.

Advertisement

Udayavani is now on Telegram. Click here to join our channel and stay updated with the latest news.

Next