Advertisement
ರೋಗಿಯು ತನ್ನ ಮೊಬೈಲ್ ಸಂಖ್ಯೆಯ ಸಹಾಯದಿಂದ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಲಭ್ಯವಿರುವ ಯಾವುದೇ ವೈದ್ಯಕೀಯ ವರದಿ ಅಥವಾ ಇತರ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಟೋಕನ್ ಸಂಖ್ಯೆಯನ್ನು ಪಡೆಯಬಹುದು. ಪೋರ್ಟಲ್‌ನಲ್ಲಿ ಲಾಗ್ ಇನ್ ಮಾಡಲು ರೋಗಿಗೆ ತಿಳಿಸಲಾಗುತ್ತದೆ. ಅವರಿಗೆ ವೈದ್ಯರು ಲಭ್ಯವಾದ ನಂತರ ಕರೆ ಮಾಡಿ ತಿಳಿಸಲಾಗುತ್ತದೆ. ರೋಗಿಯು ನೇರವಾಗಿ ವಿಡಿಯೋ ಕಾನ್ಫರೆನ್ಸಿಂಗ್ ಅಥವಾ ಪಠ್ಯ ಸಂದೇಶದ ಮೂಲಕ ವೈದ್ಯರೊಂದಿಗೆ ಚಾಟ್ ಮಾಡಬಹುದು. ಚರ್ಚೆಯ ಅನಂತರ ಇ-ಪ್ರಿಸ್ಕ್ರಿಪ್ಷನ್ ಸಹ ಪಡೆಯುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರಂಭದಲ್ಲಿ, ಇದನ್ನು ಕೆಲವು ದಿನಗಳ ಹಿಂದೆ ಪ್ರಾಯೋಗಿಕ ನೆಲೆಯಲ್ಲಿ ಪ್ರಾರಂಭಿಸಲಾಯಿತು. ಸೋಮವಾರದಿಂದ ರಾಜ್ಯದಾದ್ಯಂತ ಸೇವೆಗಳು ಲಭ್ಯವಿವೆ. ರಾಜ್ಯದ ಯಾವುದೇ ಜಿಲ್ಲೆಯ ರೋಗಿಗಳು ಸೇವೆಗಳ ಲಾಭವನ್ನು ಪಡೆಯಬಹುದು ಎಂದು ಟೋಪೆ ಹೇಳಿದರು.
ಸೇವೆಯು ದಿನದ ಮೊದಲಾರ್ಧದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30ರ ನಡುವೆ ಮಾತ್ರ ಲಭ್ಯವಿರುತ್ತದೆ. ರವಿವಾರಗಳಂದು ಲಭ್ಯವಿರುವುದಿಲ್ಲ. ಜನರ ಪ್ರತಿಕ್ರಿಯೆಯ ಆಧಾರದ ಮೇಲೆ ಸಮಯವನ್ನು ಕ್ರಮೇಣ ಹೆಚ್ಚಿಸಲಾಗುವುದು ಎಂದು ಟೋಪೆ ಹೇಳಿದರು.