ಬೆಂಗಳೂರು: ಪ್ರತಿಷ್ಠಿತ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು ಇಂಡಿಯಾ ರಾಜಧಾನಿಯಲ್ಲಿ ತನ್ನ ವಿಶೇಷ ವಾಹನ ಚಾಲನೆ ಮತ್ತು ಪ್ರದರ್ಶನಾ ಕಾರ್ಯಕ್ರಮ ಜಾಯ್‌ಫೆಸ್ಟ್-2018ಗೆ ಕ್ಕೆ ಸೋಮವಾರ ಚಾಲನೆ ನೀಡಿದೆ.
ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬಿಎಂಡಬ್ಲ್ಯು ಉತ್ಪನ್ನಗಳ ಅತ್ಯಾಧುನಿಕ ಮತ್ತು ಉನ್ನತ ಮಟ್ಟದ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವುದರೊಂದಿಗೆ ಕ್ರಿಯಾತ್ಮಕ ಚಾಲನಾ ಪ್ರದರ್ಶನಕ್ಕೂ ಅವಕಾಶ ಕಲ್ಪಿಸುತ್ತಿದೆ.
ಎರಡು ದಿನಗಳ ಜಾಯ್‌ಫೆಸ್ಟ್ ಮೂಲಕ ಬಿಎಂಡಬ್ಲ್ಯು ತನ್ನ ಗ್ರಾಹಕರಿಗೆ ವಾಹನ ಚಾಲನೆ ಕುರಿತ ಅಸಾಮಾನ್ಯ ನಿಯಂತ್ರಣ, ಚಾಲನಾ ಕುಶಲತೆ, ಅನುಭವಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುತ್ತಿದೆ. ಅಲ್ಲದೆ, ಬಿಎಂಡಬ್ಲ್ಯು ಸೆಡಾನ್ ಮತ್ತು ನ್ಪೋರ್ಟ್ಸ್ ಎಂ ಕಾರುಗಳ ಮೂಲಕ ಆಲ್ ವ್ಹೀಲ್ ಡ್ರೈವ್, ನ್ಪೋರ್ಟ್ಸ್ ಬಳಕೆ ಕಾರು ಚಾಲನೆ, ಐಶಾರಾಮಿ ಕಾರು ಚಾಲನೆ ಸೇರಿದಂತೆ ಆಧುನಿಕ ವಾಹನ ಚಾಲನೆಗೆ ಅನುಕೂಲ ಮಾಡಿಕೊಡುತ್ತಿದೆ.
ಇದೇ ಪ್ರಥಮ ಬಾರಿಗೆ ಬಂದಿರುವ ಬಿಎಂಡಬ್ಲ್ಯು 6 ಸಿರೀಸ್ ಗ್ರಾನ್ ಟುರಿಸ್ಮೋ, ಆಲ್ ನ್ಯೂ ಬಿಎಂಡಬ್ಲ್ಯು ಎಂ-5, ಆಲ್ ನ್ಯೂ ಬಿಎಂಡಬ್ಲ್ಯು 5 ಸಿರೀಸ್, ಬಿಎಂಡಬ್ಲ್ಯು 7 ಸಿರೀಸ್, ಆಲ್ ನ್ಯೂ ಬಿಎಂಡಬ್ಲ್ಯು ಎಕ್ಸ್ 3, ಬಿಎಂಡಬ್ಲ್ಯು ಎಕ್ಸ್ 1, ಬಿಎಂಡಬ್ಲ್ಯು ಎಕ್ಸ್ 5 ಕಾರುಗಳು ಟೆಸ್ಟ್ ಡ್ರೈವ್‌ಗೆ ಲಭ್ಯವಿದೆ. ಜತೆಗೆ ಬಿಎಂಡಬ್ಲ್ಯು ಪ್ರಮಾಣೀಕರಿಸಿದ ತರಬೇತುದಾರರು ವಿವಿಧ ಚಾಲನಾ ತಾಂತ್ರಿಕತೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಈ ಮಧ್ಯೆ ಬಿಎಂಡಬ್ಲ್ಯು 7 ಸಿರೀಸ್ ಕಾರುಗಳ ಪ್ರದರ್ಶನ ವಿಶೇಷವಾಗಿದೆ. ಹೈಸ್ಪೀಡ್ ಪೇ ಬ್ಯಾಕ್ ಪರಿಕಲ್ಪನೆಯ ಬಿಎಂಡಬ್ಲ್ಯು 5 ಸಿರೀಸ್‌ನ ಉನ್ನತ ಪ್ರದರ್ಶನ ಶ್ರೇಣಿಯ ಕ್ರೀಡಾ ಕಾರುಗಳು ಕಾರ್ಯಕ್ರಮದ ವಿಶೇಷತೆಯಾಗಿದೆ. 2017ರಲ್ಲಿ ಜರ್ಮನಿಯ ಗೇಮ್‌ಸ್ಕೋಮ್ ಆಟದಲ್ಲಿ ಇದು ಪ್ರಥಮ ಪ್ರದರ್ಶನ ನೀಡಿತ್ತು. ಬಿಎಂಡಬ್ಲ್ಯು ಮೋಟರ್ ನ್ಪೋರ್ಟ್ಸ್-ಜಿಎಂಬಿಎಚ್ (ಬಿಎಂಡಬ್ಲ್ಯು ಎಜಿ ಅಂಗ ಸಂಸ್ಥೆ) ಈ ಕಾರುಗಳನ್ನು ಉತ್ಪಾದಿಸುತ್ತಿದ್ದು, ಉನ್ನತ ಕಾರ್ಯಕ್ಷಮತೆ ಮೂಲಕ ಸರಿಸಾಟಿಯಿಲ್ಲದ ಚಾಲನಾ ಅನುಭವ ನೀಡುತ್ತದೆ.
2018ನೇ ಸಾಲಿನ ಬಿಎಂಡಬ್ಲ್ಯು ಜಾಯ್‌ಫೆಸ್ಟ್‌ನಲ್ಲಿ ಬಿಎಂಡಬ್ಲ್ಯು 7 ಸರಣಿಯ ವೈಯಕ್ತಿಕ ವಿಭಾಗ, ಮೂಲ ಬಿಎಂಡಬ್ಲ್ಯು ಕಾರುಗಳು ಮತ್ತು ನ್ಪೋರ್ಟ್ಸ್ ಕಾರುಗಳ ಬಿಡಿ ಭಾಗಗಳ ಪ್ರದರ್ಶನವೂ ಇದ್ದು, ಇದರೊಂದಿಗೆ ಬಿಎಂಡಬ್ಲ್ಯು ಹಣಕಾಸು ವಲಯ, ಆಹಾರ ಮತ್ತು ಪಾನೀಯ ವಿಭಾಗ, ಬಿಎಂಡಬ್ಲ್ಯು ಗೇಮಿಂಗ್ ವಲಯಗಳನ್ನು ಹೊಂದಿದೆ. ಗೇಮಿಂಗ್ ವಲಯವು ಇಡೀ ಕುಟುಂಬಕ್ಕೆ ಮನರಂಜನೆ ನೀಡುವುದರೊಂದಿಗೆ ವಿವಿಧ ಆಟಗಳನ್ನು ಆಡಿ ಬಹುಮಾನ ಗೆಲ್ಲಲು ಅವಕಾಶ ಮಾಡಿಕೊಡುತ್ತಿದೆ.