Advertisement

ಅಂಬೇಡ್ಕರ್‌ ಒಂದು ಜಾತಿಗೆ ಸೀಮಿತರಲ್ಲ

04:50 PM Apr 15, 2021 | Team Udayavani |

ಬೇಲೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಒಂದು ಜಾತಿ, ವರ್ಗ, ಧರ್ಮಕ್ಕೆಎಂದಿಗೂ ಸೀಮಿತರಾಗಿಲ್ಲ ಅವರು ವಿಶ್ವದ ಜ್ಯೋತಿಎಂದು ಜಿಪಂ ಸದಸ್ಯೆ ಲತಾಮಂಜೇಶ್ವರಿ ಹೇಳಿದರು.

Advertisement

ಅಂಬೇಡ್ಕರ್‌ 130ನೇ ಜನ್ಮದಿನೋತ್ಸವಅಂಗವಾಗಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆಮಾಡಿದ ನಂತರ ಮಾತನಾಡಿದ ಅವರು, ವಿಶ್ವದಲ್ಲಿಬುದ್ಧ-ಬಸವ ಹಾಗೂ ಅಂಬೇಡ್ಕರ ಮಾತ್ರದಾರ್ಶನಿಕ ಗುಂಪಿಗೆ ಸೇರುತ್ತಾರೆ ಕಾರಣ ಈಮೂವರು ಸಮಾಜದಲ್ಲಿನ ಅಂಕು-ಡೊಂಕುಗಳಜೊತೆಯಲ್ಲಿ ಸಮಾಜದಲ್ಲಿ ಬೇರು ಬಿಟ್ಟಿದ್ದ ಜಾತಿಪದ್ಧತಿಗಳ ವಿರುದ್ಧ ಅವಿರತ ಹೋರಾಟ ಮಾಡಿದಮಹಾನ್‌ ಪುರುಷರು ಎಂದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ ತಮ್ಮ ಸಣ್ಣವಯಸ್ಸಿನಿಂದ ಶೋಷಣೆಯಿಂದಲೇ ಮೇಲೆ ಬಂದುವಿಶ್ವದಲ್ಲಿ ಅತಿ ಹೆಚ್ಚು ಶೈಕ್ಷಣಿಕವಾಗಿ ವ್ಯಾಸಂಗಮಾಡಿದ ವ್ಯಕ್ತಿ ಎಂದು ಹೆಸರು ಮಾಡಿದ್ದಾರೆ.

ಇಂಥಅಪ್ರತಿಮ ವ್ಯಕ್ತಿಯನ್ನು ಒಂದು ಜಾತಿ ಹಾಗೂಧರ್ಮಕ್ಕೆ ಸೀಮಿತ ಮಾಡುವುದು ಸರಿಯಲ್ಲ. ಇವರವಿಚಾರಧಾರೆಗಳು ಇಡೀ ಮನುಕುಲಕ್ಕೆಮಾರ್ಗದರ್ಶನ ವಾಗಬೇಕಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕ ಕೆ.ಎಸ್‌.ಲಿಂಗೇಶ್‌,ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಮಾ,ತಹಸೀಲ್ದಾರ್‌ ಎನ್‌.ವಿ.ನಟೇಶ್‌, ತಾಲೂಕುಪಂಚಾಯ್ತಿ ಸದಸ್ಯರಾದ ಮಂಜುನಾಥ, ಶಶಿಕುಮಾರ್‌, ಸೋಮಯ್ಯ, ಉಪಾಧ್ಯಕ್ಷ ಜಮುನಾ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಮೋಹನ್‌ಕುಮಾರ್‌, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next