Advertisement
ಕೇಂದ್ರ ಸರಕಾರ 2016ರ ಬಜೆಟ್‌ನಲ್ಲಿ 6,865 ಕೋಟಿ ರೂ. ವೆಚ್ಚದಲ್ಲಿ 10 ಸಾವಿರ ಹೊಸ ಎಫ್ಒಪಿ ಸ್ಥಾಪನೆ ಯೋಜನೆ ಪ್ರಕಟಿಸಿದೆ. ಬೆಳೆ ಬೆಳೆಯುವ ರೈತ- ಕೊಳ್ಳುವ ಗ್ರಾಹಕರ “ನೇರ ವಹಿವಾಟು’ ಇತ್ತೀಚಿನ ಟ್ರೆಂಡ್ ಆಗಿದೆ. ಆ ಮೂಲಕ ಮಾರುಕಟ್ಟೆ ಬೆಲೆಗಿಂತ ಶೇ.15ರಿಂದ 30ರಷ್ಟು ಅಧಿಕ ಆದಾಯ ಪಡೆಯುವ ಅವಕಾಶ ರೈತರಿಗಿದ್ದರೆ, ಅಂಗಡಿ, ಮಾರುಕಟ್ಟೆ ದರಕ್ಕಿಂತ ಅಗ್ಗದಲ್ಲಿ ಕೃಷಿ ಉತ್ಪನ್ನ ಖರೀದಿಸುವ ಅವಕಾಶ ಗ್ರಾಹಕರದ್ದು.
ಮಲ್ಲಿಗೆ ಬೆಳೆಗೆ ಸಂಬಂಧಿಸಿದಂತೆ ಹೊಸ ದಾಗಿ 4 ಎಫ್ಪಿಒ ರಚನೆ ಆಗಲಿದೆ. ಬೆಳೆ ಆಯ್ಕೆ
ಉಡುಪಿ ತಾಲೂಕಿನ ಎಫ್ಪಿಒಗೆ ತೆಂಗು ಮತ್ತು ತೋಟಗಾರಿಕೆ ಬೆಳೆ, ಕಾಪು ತಾಲೂಕಿನ ಎಫ್ಒಪಿಒಗೆ ಮಲ್ಲಿಗೆ, ಕುಂದಾಪುರ ಎಫ್ಒಪಿಒಗೆ ಗೇರು, ಕಾರ್ಕಳ ಎಫ್ಪಿಒಗೆ ತೆಂಗು ಮತ್ತು ತೋಟಗಾರಿಕೆ ಬೆಳೆ ಆಯ್ಕೆ ಮಾಡ ಲಾಗಿದೆ. ಕಾರ್ಕಳದ ನಿಟ್ಟೆ, ಉಡುಪಿಯ ಹಿರಿಯಡ್ಕ, ಕುಂದಾಪುರದ ವಂಡ್ಸೆ, ಕಾಪುವಿನ ಶಂಕರಪುರದಲ್ಲಿ ಈ ರೈತ ಉತ್ಪಾದಕ ಸಂಸ್ಥೆಗಳ ಕೇಂದ್ರ ಕಚೇರಿ ಕಾರ್ಯನಿರ್ವಹಿಸಲಿದೆ.
Related Articles
Advertisement
ಸಂಸ್ಥೆಯ ಸ್ವರೂಪ ಹೇಗೆ? ಮೊದಲಿಗೆ ಜಿಲ್ಲೆಯಲ್ಲಿ ಯಾವ ಬೆಳೆ ಯನ್ನು ಎಲ್ಲಿ ಹೆಚ್ಚಾಗಿ ಬೆಳೆಯಲಾಗು ತ್ತದೆ ಎಂಬುದನ್ನು ಗಮನಿಸಲಾಗುತ್ತದೆ. ಆಯಾ ಭಾಗದಲ್ಲಿ ಕೃಷಿ ಉತ್ಪನ್ನಗಳ ಕ್ಲಸ್ಟರ್‌ಗಳಲ್ಲಿ ಎಫ್ಒಪಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ರೈತ ಉತ್ಪಾದಕ ಸಂಸ್ಥೆ ಅಸ್ತಿತ್ವಕ್ಕೆ ತರಲು ಕನಿಷ್ಠ 300 ಹಾಗೂ ಗರಿಷ್ಠ 1,000 ರೈತರ ಅಗತ್ಯವಿದೆ. ಅವರಿಂದ ತಲಾ 1,000 ರೂ.ನಂತೆ ಒಟ್ಟು 10ಲ.ರೂ. ಶೇರು ಹಣ ಸಂಗ್ರಹವಾಗುತ್ತದೆ. ಇದಲ್ಲದೇ ಕೇಂದ್ರ ಸರಕಾರ ಅಧೀನದ ಸಣ್ಣ ರೈತರ ಒಕ್ಕೂಟ 10 ಲ.ರೂ. ನೆರವು ನೀಡುತ್ತಿದ್ದು, 20 ಲ.ರೂ. ಬಂಡವಾಳದೊಂದಿಗೆ ರೈತರ ಕಂಪೆನಿ ಕಾರ್ಯ ನಿರ್ವಹಿಸುತ್ತದೆ. ಸಂಘದ ದೈನಂದಿನ ಕಾರ್ಯ ನಿರ್ವಹಣೆಗೆ ಸಿಇಒ ಹಾಗೂ ಸಿಬಂದಿ ನೇಮಕಾತಿ ಮಾಡಿಕೊಳ್ಳಬೇಕು. ಪೂರ್ಣ ಪ್ರಮಾಣದಲ್ಲಿ ಸಂಸ್ಥೆ ಅಸ್ತಿತ್ವಕ್ಕೆ ಬಂದ ಅನಂತರ ಸದಸ್ಯರ ಉತ್ಪನ್ನಗಳನ್ನು ಮಾರುಕಟ್ಟೆಯ ಗರಿಷ್ಠ ಮೌಲ್ಯಕ್ಕೆ ಖರೀದಿ ಮಾಡಲಾಗುತ್ತದೆ
30 ಲ.ರೂ. ನೆರವು ವ್ಯವಹಾರ ಸಂಸ್ಥೆಗಳ ಜತೆ ತೊಡಗಿಸಿಕೊಂಡು 5 ವರ್ಷಂಪ್ರತಿ ಎಫ್ಪಿಒಗೆ ವೃತ್ತಿಪರ ಬೆಂಬಲ ನೀಡಲು ಅನುಷ್ಠಾನ ಏಜೆನ್ಸಿ ಗಳನ್ನು ಗುರುತಿಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ನಿಟ್ಟೆ ಇನ್ಕ್ಯುಬೇಷನ್ ಸೆಂಟರ್ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರಕಾರ ಪ್ರತೀ ಸಂಸ್ಥೆಗೆ 3 ವರ್ಷದವರೆಗೆ ಸುಮಾರು 30 ಲ.ರೂ. ನೆರವು ನೀಡುತ್ತದೆ. 1,000 ಮಹಿಳಾ ಸದಸ್ಯರು
ಕಾಪು ತಾಲೂಕಿನ ಶಂಕರಪುರದಲ್ಲಿ ಉಡುಪಿ ಮಲ್ಲಿಗೆ ಬೆಳೆಗಾರರ ಸಂಘ ರಚಿಸಲಾಗಿದ್ದು, ಇಲ್ಲಿರುವ 1,000 ಸದಸ್ಯರು ಮಹಿಳೆಯರು. ರಾಜ್ಯದಲ್ಲೇ ಮೊದಲ ಬಾರಿಗೆ ಆಡಳಿತ ನಿರ್ವಹಣೆಗೂ ಮಹಿಳೆಯರದ್ದೇ ಸಾರಥ್ಯ. ಇಲ್ಲಿ ನಿರ್ದೇಶಕರು, ಸಿಇಒ, ಸಿಬಂದಿ ಎಲ್ಲರೂ ಮಹಿಳೆಯರು. ಮೌಲ್ಯವರ್ಧನೆಗೆ ಎಫ್ಒಪಿ ಸ್ಥಾಪನೆ
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಎಫ್ಒಪಿಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ತೆಂಗು, ಮಲ್ಲಿಗೆ, ಕಾಳುಮೆಣಸು ಉತ್ಪನ್ನಗಳಿಗೆ ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಮತ್ತು ರಫ್ತು ಉತ್ತೇಜಿಸಲು ರೈತರಿಗೆ ಸಂಸ್ಥೆ ನೆರವಾಗಲಿದೆ. ನಿಟ್ಟೆ ಇನ್ಕ್ಯುಬೇಷನ್ ಸೆಂಟರ್ ನೋಡಲ್ ಸಂಸ್ಥೆಯಾಗಿದ್ದು, ಎಫ್ಒಪಿಗಳನ್ನು ಮುನ್ನಡೆಸಲು 3 ವರ್ಷ ಅಗತ್ಯ ತರಬೇತಿ, ಮಾರ್ಗದರ್ಶನ ನೀಡಲಿದೆ.
-ಡಾ| ಕೆಂಪೇಗೌಡ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಉಡುಪಿ