Advertisement

10 ಹುದ್ದೆಗೆ 6 ಸಾವಿರ ಅರ್ಜಿ

06:00 AM Aug 20, 2018 | Team Udayavani |

ನವದೆಹಲಿ: ಕೇಂದ್ರ ಸರ್ಕಾರದ 10 ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಖಾಸಗಿ ವಲಯದ 6 ಸಾವಿರ ಪರಿಣಿತರು ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸಿಬ್ಬಂದಿ ತರಬೇತಿ ಸಚಿವಾಲಯವು, ಐಎಎಸ್‌ ಅಧಿಕಾರಿಗಳನ್ನು ನೇಮಿಸುವುದರ ಬದಲಿಗೆ ಖಾಸಗಿ ವಲಯದಿಂದ ಕಂದಾಯ, ಹಣಕಾಸು ಸೇವೆಗಳು, ಆರ್ಥಿಕ ವ್ಯವಹಾರಗಳು, ಕೃಷಿ ಮತ್ತು ಕೃಷಿಕರ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಜಂಟಿ ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಒಟ್ಟು 6,077 ಅರ್ಜಿಗಳು ಬಂದಿವೆ ಎಂದು ಸಚಿವಾಲಯ ತಿಳಿಸಿದೆ. ಅರ್ಜಿ ಸಲ್ಲಿಕೆಗೆ ಜು.30 ಕೊನೆಯ ದನವಾಗಿತ್ತು. ಒಂದು ಹುದ್ದೆಗೆ 1100 ರವರೆಗೂ ಅರ್ಜಿಗಳು ಬಂದಿವೆ. ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್‌ ಮಾಡುವ ಪ್ರಕ್ರಿಯೆಯನ್ನು ಸಚಿವಾಲಯ ಆರಂಭಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next