Advertisement
ಚಿರತೆಯೊಂದು ಎಲೆಕ್ಟ್ರಾನಿಕ್ ಸಿಟಿ ಟೋಲ್ ಸಮೀಪದಲ್ಲಿರುವ ಎನ್‌ಟಿಟಿಎಫ್ ಆವರಣದ ಒಳಗೆ ಜಿಗಿದಿದೆ. ಬಳಿಕ ಪುನಃ ಅದೇ ರಸ್ತೆಗೆ ಹಿಂತಿರುಗಿ ಬಂದು ಇನ್ನೊಂದು ಬಾಗಕ್ಕೆ ಹಾರಿದೆ. ಹೆದ್ದಾರಿಯನ್ನು ದಾಟಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಿದೆ. ಆ ಸಂದರ್ಭದಲ್ಲಿ ಸುತ್ತ-ಮುತ್ತ ಜನರ ಓಡಾಟ ಇರಲಿಲ್ಲ. ಹೀಗಾಗಿ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಸ್ಥಳೀಯ ಸಿಸಿಕ್ಯಾಮರಾ ಪರಿಶೀಲನೆ ವೇಳೆ ಚಿರತೆಯ ಚಲನಾವಲನಾ ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಇತ್ತ ಮಂಗಳವಾರ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಅರಣ್ಯ ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ದೌಡಾಯಿಸಿ ಚಿರತೆ ಗಾಗಿ ಕೆಲ ಹೊತ್ತು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಚಿರತೆಯ ಸುಳಿವೂ ಸಿಗದೇ ಇದ್ದಾಗ ಮೈಕ್ ಮೂಲಕ ಸ್ಥಳೀಯರಲ್ಲಿ ಚಿರತೆ ಓಡಾಟದ ಬಗ್ಗೆ ಎಚ್ಚರಿಕೆ ನೀಡಿದರು.
Related Articles
Advertisement