Advertisement

ಹುತಾತ್ಮ ಯೋಧನ  ಪತ್ನಿ ಸೇನೆಗೆ ಸೇರ್ಪಡೆ

11:56 PM Nov 20, 2021 | Team Udayavani |

ಚೆನ್ನೈ: 2018ರಲ್ಲಿ ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾಗಿದ್ದ ಮೇಜರ್‌ ದೀಪಕ್‌ ನೈನಾವಾಲ್‌ ಅವರ ಪತ್ನಿ ಜ್ಯೋತಿ ನೈನಾವಾಲ್‌ ಅವರು ಶನಿವಾರದಂದು ಅಧಿಕೃತವಾಗಿ ಸೇನೆ ಸೇರಿದ್ದಾರೆ.

Advertisement

ಚೆನ್ನೈಯ ಸೇನಾ ತರಬೇತಿ ಕೇಂದ್ರದಲ್ಲಿ 11 ತಿಂಗಳ ತರಬೇತಿ ಪೂರ್ಣ ಗೊಳಿಸಿದ ಒಟ್ಟು 153 ಭಾರತೀಯ ಕೆಡೆಟ್‌ಗಳನ್ನು ಶನಿವಾರ ಅಧಿಕೃತವಾಗಿ ಸೇನೆಗೆ ಸೇರ್ಪಡಿಸಿ­ಕೊಳ್ಳಲಾಗಿದ್ದು, ಅದರಲ್ಲಿ ಜ್ಯೋತಿಯೂ ಸೇರಿದ್ದಾರೆ. ಜ್ಯೋತಿಯವರಿಗೆ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆಯನ್ನು ನೀಡಲಾಗಿದೆ.

ಅಮ್ಮ ನನಗೆ ಸ್ಫೂರ್ತಿ: ಜ್ಯೋತಿಯವರ ಸೇನಾ ಸೇರ್ಪಡೆ ಅವರ ಪುತ್ರಿ ಲಾವಣ್ಯಳಿಗೂ ಸ್ಫೂರ್ತಿ ನೀಡಿದೆಯಂತೆ. “ನನ್ನ ಅಮ್ಮ ಸೇನೆ ಸೇರುವುದಾಗಿ ಯಾವಾಗಲೂ ಹೇಳುತ್ತಿದ್ದಳು. ಇಂದು ಅವಳ ಕನಸು ನನಸಾಗಿದೆ. ನಾನು ವೈದ್ಯೆಯಾಗುವ ಕನಸು ಕಂಡಿದ್ದೆ. ಆದರೆ ನನ್ನ ಅಪ್ಪ ಹುತಾತ್ಮರಾದ ಅನಂತರ ಸೇನೆಯ ವೈದ್ಯೆಯೇ ಆಗಬೇಕೆಂದು ನಿರ್ಧರಿಸಿ ದ್ದೇನೆ’ ಎಂದು ಜ್ಯೋತಿಯವರ ಮಗಳು, 11 ವರ್ಷದ ಲಾವಣ್ಯ ಖುಷಿಯಿಂದ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next