Advertisement
ಒಟ್ಟು 50 ಯುದ್ಧ ವಿಮಾನಗಳು ಜ.26ರಂದು ಕರ್ತವ್ಯಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ. ಭೂಸೇನೆಯ ನಾಲ್ಕು ವಿಮಾನಗಳೂ ಇದರಲ್ಲಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಪಥವನ್ನು ಕರ್ತವ್ಯಪಥ ಎಂದು ನಾಮಕರಣ ಮಾಡಿದ ಬಳಿಕ ಮೊದಲ ಬಾರಿಗೆ ಅಲ್ಲಿ ಗಣರಾಜ್ಯ ದಿನದ ಕಾರ್ಯಕ್ರಮ ಮತ್ತು ಪಥ ಸಂಚಲನ ನಡೆಯಲಿದೆ. ಹಾರಾಟ ನಿಷೇಧ:
ಗಣರಾಜ್ಯ ದಿನ ಪ್ರಯುಕ್ತ ಜ.19ರಿಂದ 24 ಮತ್ತು 26ರಿಂದ 29ರವರೆಗೆ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ವ್ಯಾಪ್ತಿಯಲ್ಲಿ ವಿಮಾನಗಳ ಹಾರಾಟ ನಿಷೇಧ ಆದೇಶ ಹೊರಡಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.15ರ ವರೆಗೆ ಈ ನಿಯಮ ಅನ್ವಯವಾಗಲಿದೆ.