Advertisement

ಗೌರವಪೂರ್ವಕ ಮೃತ ಸೋಂಕಿತರ ಸಂಸ್ಕಾ ರ

04:08 PM May 10, 2021 | Team Udayavani |

ಬೀದರ: ಕೊರೊನಾ ಸೋಂಕಿತ ಮೃತ ದೇಹಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಗೌರವಪೂರ್ವಕವಾಗಿ ಅಂತ್ಯಕ್ರಿಯೆಯನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಅಗತ್ಯ ಕ್ರಮ ವಹಿಸಿದೆ. ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆ ಪ್ರಾ ಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತಂತೆ ಚರ್ಚಿಸಲಾಯಿತು. ಕೋವಿಡ್‌ -19ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಗೌರವ ಪೂರ್ವಕವಾಗಿ ನಡೆಸಲು ಕೈಗೊಳ್ಳುತ್ತಿರುವ ವ್ಯವಸ್ಥೆ ಬಗ್ಗೆ ಜಿಲ್ಲಾ ಧಿಕಾರಿಗಳು ಇದೇ ವೇಳೆ ಮಾಹಿತಿ ಪಡೆದರು.

Advertisement

ಈ ವೇಳೆ ಮಾತನಾಡಿದ ಜಿಲ್ಲಾಧಿ ಕಾರಿಗಳು, ಬೀದರ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌-19 ಸೋಂಕು ನಿಯಂತ್ರಿಸಲು ಹಾಗೂ ಕೋವಿಡ್‌-19 ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರವನ್ನು ಸರ್ಕಾರದ ಮಾರ್ಗಸೂಚಿಯನ್ವಯ ನಿರ್ವಹಿಸುವುದು ಅತೀ ಅವಶ್ಯಕವಾಗಿದೆ. ನಗರಸಭೆಯಿಂದ ಎಲೆಕ್ಟ್ರಾನಿಕ್‌ ಕ್ರೆಮಟೋರಿಯಂ ಯಂತ್ರವನ್ನು ಕೂಡ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.

ಈ ಕಾರ್ಯ ಪೂರ್ಣಗೊಳ್ಳುವವರೆಗೆ ಪ್ರತಿ ಮೃತ ದೇಹಗಳನ್ನು ಗೌರವಪೂರ್ವಕವಾಗಿ ಶವ ಸಂಸ್ಕಾರ ಮಾಡಲು 3000 ರೂ.ಗಳಂತೆ ನೀಡಲಾಗುವುದು ಎಂದರು. ಜಿಪಂ ಸಿಇಒ ಜಹೀರಾ ನಸೀಮ್‌ ಮಾತನಾಡಿ, ಹ್ಯುಮಾನಿಟಿ ಫಸ್ಟ್‌ ಫೌಂಡೇಶನ್‌ನ ಸ್ವಯಂ ಸೇವಾ ಸಂಘದ ಅಧ್ಯಕ್ಷರು, ಕೋವಿಡ್‌-19 ಸೋಂಕಿನಿಂದ ಮೃತಪಟ್ಟವರ ಮೃತ ದೇಹವನ್ನು ಬ್ರಿಮ್ಸ್ ಆಸ್ಪತ್ರೆಯಿಂದ ಪಡೆದು ಅಂತ್ಯಕ್ರಿಯೆ ನೆರವೇರಿಸಲು ಸ್ವಪ್ರೇರಣೆಯಿಂದ ಮುಂದಾಳತ್ವ ವಹಿಸುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕೋವಿಡ್‌-19 ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಸಂಬಂಧಿ ಸಿದಂತೆ ಬ್ರಿàಮ್ಸ್‌ ಆಸ್ಪತ್ರೆಗೆ 24×7 ಅವ ಧಿಯಲ್ಲಿ ಒಂದು ದಿನಕ್ಕೆ 6 ಸಿಬ್ಬಂದಿ, ಪ್ರತಿ 8 ಗಂಟೆಗೆ 2 ಸಿಬ್ಬಂದಿಯಂತೆ ನಿಯೋಜಿಸಲು ಹಾಗೂ ಪ್ರತಿ ಸಿಬ್ಬಂದಿಗೆ ಮಾಸಿಕ 16,000 ರೂ. ಸಂಭಾವನೆ ನೀಡುವುದಾಗಿ ಹ್ಯುಮಾನಿಟಿ ಫಸ್ಟ್‌ ಫೌಂಡೇಶನ್‌ನ ಸ್ವಯಂ ಸೇವಾ ಸಂಘದವರಿಗೆ ತಿಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ನಾಗೇಶ ಡಿ.ಎಲ್‌., ಡಿಎಚ್‌ಒ ಡಾ| ವಿ.ಜಿ.ರೆಡ್ಡಿ ಹಾಗೂ ಇನ್ನೀತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next