Advertisement

ಈ ಎರಡು ಗ್ರಾಮಕ್ಕೆ ಇದು ಕೊನೆ ಚುನಾವಣೆ?

05:43 PM Dec 20, 2020 | Suhan S |

ದೊಡ್ಡಬಳ್ಳಾಪುರ: ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತವಾಗಿ ನೀರುಣಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿವೆ.

Advertisement

ಈ ನಡುವೆ ಯೋಜನೆಗಳ ಕಾಮಗಾರಿಗಳ ಕೆಲಸ ನಿಗದಿತ ಸಮಯದಲ್ಲಿ ನಡೆದರೆ, ಸಾಸಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಲಕ್ಕೇನಹಳ್ಳಿ ಹಾಗೂ ಗರುಡಗಲ್ಲು ಗ್ರಾಮ ಮುಳುಗಡೆಯಾಗಲಿದ್ದು, ಬಹುಶಃ ಇಲ್ಲಿನ ಐದಾರು ಗ್ರಾಮಗಳಿಗೆ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಕೊನೆಯ ಚುನಾವಣೆಯಾಗಲಿದೆ.

ಎತ್ತಿನ ಹೊಳೆ ಯೋಜನೆಗಾಗಿ ನಿರ್ಮಾಣ ಗೊಳ್ಳಲಿರುವ ಬೈರಗೊಂಡ್ಲು ಜಲಾಶಯಕ್ಕೆ ದೊಡ್ಡ ಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ 11ಗ್ರಾಮಗಳು ಹಾಗೂ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ 17 ಗ್ರಾಮಗಳು ಮುಳುಗಡೆಯಾಗಲಿವೆ.

ಬೈರಗೊಂಡ್ಲು ಜಲಾಶಯ ನಿರ್ಮಾಣ: ಬೈರಗೊಂಡ್ಲು ಜಲಾಶಯದ ಏರಿ ಹಾಗೂ ಮುಳಗಡೆ ಪ್ರದೇಶ ತುಮಕೂರು ಜಿಲ್ಲೆಯಕೊರಟೆಗೆರೆ ತಾಲೂಕು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸಾಸಲುಹೋಬಳಿಯಲ್ಲಿಗುರುತಿಸಲಾಗಿದೆ. ಏರಿಯ ಉದ್ದ 4.62 ಕಿ.ಮೀ. ಇದೆ. ಈ ಜಲಾಶಯದ ಒಟ್ಟಾರೆ ಮುಳುಗಡೆ ಪ್ರದೇಶ 5360 ಎಕರೆಯಾಗಿದೆ.

ಇದರಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಮಚ್ಚೇನಹಳ್ಳಿ, ಶ್ರೀರಾಮನಹಳ್ಳಿ, ಶಿಂಗೇನಹಳ್ಳಿ, ಗಾಣದಾಳು, ಕಣಕೇನಹಳ್ಳಿ, ನರಸಾಪುರ, ಆಲಪ್ಪನಹಳ್ಳಿ, ಬೈಯಪ್ಪನಹಳ್ಳಿ, ಅಂಕೋನಹಳ್ಳಿ ಗ್ರಾಮಗಳು ಭಾಗಶಃ ಹಾಗೂ ಲಕ್ಕೇನಹಳ್ಳಿ, ದಾಸರಪಾಳ್ಯ ಹಾಗೂ ಗರುಡಗಲ್ಲು ಗ್ರಾಮಗಳು ಪೂರ್ಣ, ಒಟ್ಟು11 ಗ್ರಾಮಗಳು ಭಾಗಶಃ, ತಾಲೂಕಿನ 2,678 ಎಕರೆ ಭೂಮಿ ಮುಳುಗಡೆಯಾಗಲಿವೆ. ಇದರಿಂದಾಗಿ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಾತ್ರ ಈ ಗ್ರಾಮಗಳ ಜನರು ಮತಚಲಾಯಿಸಲಿದ್ದಾರೆ. ನಂತರದ ದಿನಗಳಲ್ಲಿ ಈ ಗ್ರಾಮಗಳು ಎಲ್ಲಿ ನೆಲೆ ನಿಲ್ಲುತ್ತವೆ ಎನ್ನುವುದು ಇನ್ನೂ ನಿಗದಿಯಾಗಿಲ್ಲ.

Advertisement

ಮರೀಚಿಕೆಯಾದ ಅಭಿವೃದ್ಧಿ: ಸಾಸಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬೈರಗೊಂಡ್ಲು ಜಲಾಶಯಕ್ಕೆ ಮುಳುಗಡೆಯಾಗುತ್ತಿರುವ ಗರುಡಗಲ್ಲು – ಲಕ್ಕೇನಹಳ್ಳಿ 7ನೇ ವಾರ್ಡ್‌ನಲ್ಲಿ 533ಜನ ಮತದಾರರಿದ್ದಾರೆ. ಮಚ್ಚೇನಹಳ್ಳಿ – ದಾಸರಪಾಳ್ಯ ಗ್ರಾಮದಲ್ಲಿ 1150 ಜನ ಮತದಾರರಿದ್ದಾರೆ. ಎತ್ತಿನಹೊಳೆ ಯೋಜನೆಯ ಪ್ರಸ್ತಾಪ ಆರಂಭವಾದಾಗಿನಿಂದಲೂ ನಮ್ಮೂರಿನಲ್ಲಿಯಾವುದೇ ಅಭಿವೃದ್ಧಿ ಕೆಲಸಗಳು ಮಾತ್ರ ಇಲ್ಲಿಯವರೆಗೂ ನಡೆದಿಲ್ಲ.

ಮುಳುಗಡೆಯಾಗುತ್ತಿರುವ ಗ್ರಾಮದಲ್ಲಿ ಏಕೆ ಅಭಿವೃದ್ಧಿ ಕೆಲಸ ಎನ್ನುತ್ತಾರೆ ಅಧಿಕಾರಿಗಳು. ಆದರೆ,ಗ್ರಾಮವನ್ನು ಎಲ್ಲಿಗೆ ಸ್ಥಳಾಂತರ ಮಾಡುತ್ತೇವೆ ಎನ್ನುವ ಬಗ್ಗೆ ಮಾತ್ರ ಇಲ್ಲಿಯವರೆಗೂ ಯಾವುದೇ ಸ್ಪಷ್ಟತೆಇಲ್ಲದಾಗಿದೆ. ಈ ಹಿಂದೆ ಜಮೀನು ಅಳತೆ ಮಾಡಲು ಬಂದಿದ್ದಾಗ ಪೈಪ್‌ಲೈನ್‌ ಅಳವಡಿಸುವುದಾಗಿ ಹೇಳಿದ್ದರು. ಆದರೆ, ಈಗ ಗ್ರಾಮವೇ ಮುಳುಗಡೆ ಯಾಗುತ್ತಿದೆ. ಈ ಬಗ್ಗೆ ಜನ ಆತಂಕಗೊಂಡಿದ್ದಾರೆ.

ಸ್ಥಳಾಂತರ ಮಾಡುವ ಗ್ರಾಮದಲ್ಲಾದರೂ ಎಲ್ಲಾ ಮೂಲ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎನ್ನುವುದೇ ನಮ್ಮ ಕನಸಾಗಿದೆ ಎನ್ನುತ್ತಾರೆ ಗ್ರಾಮದ ವೀರೇಂದ್ರಕುಮಾರ್‌, ಪರ್ಯಾಯ ಮಾರ್ಗ ಇತ್ತು: ದೊಡ್ಡಬಳ್ಳಾಪುರ ತಾಲೂಕಿನ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತರೆ ತಾಲೂಕಿಗಳಲ್ಲಿನ ದೊಡ್ಡ ಕೆರೆಗಳನ್ನು ಅಭಿವೃದ್ಧಿ ಪಡಿಸಿ ನೀರು ಸಂಗ್ರಹಿಸಬಹುದಾಗಿತ್ತು. ಇದರಿಂದ ನಮ್ಮ ಹಿರಿಯರು ಬಾಳಿ ಬದುಕಿದ ಊರು ಉಳಿಯುತ್ತಿತ್ತು. ತಾಲೂಕಿನ ಎಲ್ಲಾಪ್ರದೇಶದಲ್ಲೂ ಅಂತರ್ಜಲವೂ ವೃದ್ಧಿಯಾಗುವಮೂಲಕ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುತ್ತಿತ್ತು ಎನ್ನುವುದು ರೈತರಾದ ಮುತ್ತರಾಯಪ್ಪ, ರಂಗಣ್ಣ, ರಾಜಣ್ಣ ಅವರ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next