Advertisement
ಹೌದು, ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಈ ಹಿಂದೆ ಘೋಷಿಸಿತ್ತು. ಈಗ ಹೀರೋ ಮೊಟೊಕಾರ್ಪ್ ನ ಸರದಿ.
Related Articles
Advertisement
ಕೋವಿಡ್ ಬಿಕ್ಕಟ್ಟು ಹಾಗೂ ಕಚ್ಚಾ ವಸ್ತುಗಳು ಮತ್ತು ಸರಕುಗಳ ಬೆಲೆಯಲ್ಲಿ ನಿರಂತರ ಹೆಚ್ಚಳ ಕಂಡು ಬಂದ ಹಿನ್ನೆಲೆಯಲ್ಲಿ ಸ್ಕೂಟರ್, ಬೈಕ್ ಗಳ ಬೆಲೆಯಲ್ಲಿಯೂ ಹೆಚ್ಚಳ ಮಾಡಬೇಕಾದ ಅನಿವಾರ್ಯದ ಸ್ಥಿತಿಯಲ್ಲಿ ಕಂಪೆನಿ ಇದೆ. ಹಾಗಾಗಿ ತನ್ನ ಉತ್ಪನ್ನಗಳ ಮೇಲೆ ಮೂರು ಸಾವಿರ ದ ತನಕ ಬೆಲೆ ಏರಿಕೆ ಮಾಡುವುದಾಗಿ ಹೇಳಿಕೊಂಡಿದೆ
ಮಾಸಿಕ ಮಾರಾಟದಲ್ಲಿ 50.83 ರಷ್ಟು ಕುಸಿತ :
ಇನ್ನು, ಮೇ 2021 ರಲ್ಲಿ, ಕಂಪನಿಯ ಮಾಸಿಕ ಮಾರಾಟವು 50.83 ಪ್ರತಿಶತದಷ್ಟು ಕುಸಿದಿದೆ. ಇದೀಗ ಮತ್ತೆ ಬೆಲೆ ಏರಿಕೆ ಮಾಡಿರುವುದು ಮಾರಾಟದ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ : ಯೂರೋ ಕಪ್ ಫುಟ್‌ಬಾಲ್; ವಿಶ್ವ ಚಾಂಪಿಯನ್ನರಿಗೆ ಸೋಲುಣಿಸಿದ ಸ್ವಿಟ್ಸರ್ಲೆಂಡ್