Advertisement

ಮಾಲಿಂಗ, ಸುರಂಗ ಇಲ್ಲದ ಟಿ20 ತಂಡ

06:55 AM Dec 16, 2017 | Team Udayavani |

ಕೊಲಂಬೊ: ಅನುಭವಿ ಲಸಿತ ಮಾಲಿಂಗ ಮತ್ತು ಪೇಸ್‌ ಬೌಲರ್‌ ಸುರಂಗ ಲಕ್ಮಲ್‌ ಅವರನ್ನು ಹೊರಗಿರಿಸಿ ಭಾರತ ವಿರುದ್ಧದ ಟಿ20 ಸರಣಿಗಾಗಿ ಶ್ರೀಲಂಕಾ ತನ್ನ ತಂಡವನ್ನು ಅಂತಿಮಗೊಳಿಸಿದೆ. ತಿಸರ ಪೆರೆರ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಲಸಿತ ಮಾಲಿಂಗ ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ನಲ್ಲಿ ಆಡುತ್ತಿದ್ದು, ವೈಯಕ್ತಿಕ ಕಾರಣಗಳಿಂದ ಮುಂಚಿತವಾಗಿ ತವರಿಗೆ ಆಗಮಿಸಿದ್ದರು. ಹೀಗಾಗಿ ಅವರಿಗೆ “ವಿಶ್ರಾಂತಿ’ ನೀಡಲಾಗಿದೆ. ಆದರೆ ಭಾರತದ ಅಂಗಳದಲ್ಲಿ ಮಿಂಚಿದ ಸುರಂಗ ಲಕ್ಮಲ್‌ ಅವರನ್ನು ಕೈಬಿಟ್ಟ ಕಾರಣ ತಿಳಿದಿಲ್ಲ. ಇವರಿಬ್ಬರ ಗೈರಲ್ಲಿ ಲಂಕಾದ ಪೇಸ್‌ ಬೌಲಿಂಗ್‌ ವಿಭಾಗ ದುರ್ಬಲಗೊಂಡಿದೆ.

ಅಖೀಲ ಧನಂಜಯ ಏಕೈಕ ಸ್ಪೆಷಲಿಸ್ಟ್‌ ಸ್ಪಿನ್ನರ್‌. ಸಚಿತ ಪತಿರಣ ಮತ್ತು ಚತುರಂಗ ಡಿ’ಸಿಲ್ವ ಆಲ್‌ರೌಂಡರ್‌ಗಳಾಗಿದ್ದಾರೆ.

ತಂಡದ ಆರಂಭಿಕ ಸ್ಥಾನಕ್ಕೆ ನಾಲ್ವರ ಪೈಪೋಟಿ ಇದೆ. ಇವರೆಂದರೆ ಕುಸಲ್‌ ಪೆರೆರ, ಸಮರವಿಕ್ರಮ, ತರಂಗ ಮತ್ತು ಗುಣತಿಲಕ. ಇವರಲ್ಲಿ ಕುಸಲ್‌ ಪೆರೆರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಬಳಿಕ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿಲ್ಲ. ಪೆರೆರ ಕೀಪರ್‌ ಆಗಿದ್ದು, ಇವರ ಗೈರಲ್ಲಿ ನಿರೋಷನ್‌ ಡಿಕ್ವೆಲ್ಲ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಕೀಪಿಂಗ್‌ ನಡೆಸುತ್ತ ಬಂದಿದ್ದಾರೆ.

ಟಿ20 ಪಂದ್ಯಗಳು ಕಟಕ್‌ (ಡಿ. 20), ಇಂದೋರ್‌ (ಡಿ. 22) ಮತ್ತು ಮುಂಬಯಿಯಲ್ಲಿ (ಡಿ. 24) ನಡೆಯಲಿವೆ.

Advertisement

ಶ್ರೀಲಂಕಾ ತಂಡ: ತಿಸರ ಪೆರೆರ (ನಾಯಕ), ಉಪುಲ್‌ ತರಂಗ, ಏಂಜೆಲೊ ಮ್ಯಾಥ್ಯೂಸ್‌, ಕುಸಲ್‌ ಪೆರೆರ, ದನುಷ್ಕ ಗುಣತಿಲಕ, ನಿರೋಶನ್‌ ಡಿಕ್ವೆಲ್ಲ, ಅಸೇಲ ಗುಣರತ್ನೆ, ಸದೀರ ಸಮರವಿಕ್ರಮ, ದಸುನ್‌ ಶಣಕ, ಚತುರಂಗ ಡಿ’ಸಿಲ್ವ, ಸಚಿತ ಪತಿರಣ, ಅಖೀಲ ಧನಂಜಯ, ದುಷ್ಮಂತ ಚಮೀರ, ನುವಾನ್‌ ಪ್ರದೀಪ್‌, ವಿಶ್ವ ಫೆರ್ನಾಂಡೊ.

Advertisement

Udayavani is now on Telegram. Click here to join our channel and stay updated with the latest news.

Next