Advertisement

4 ಎಸೆತಗಳಲ್ಲಿ 4 ವಿಕೆಟ್‌ ಹಾರಿಸಿದ ಮಾಲಿಂಗ

12:39 AM Sep 07, 2019 | Sriram |

ಪಲ್ಲೆಕಿಲೆ: ಲಂಕೆಯ ಬೌಲಿಂಗ್‌ ಹೀರೋ ಲಸಿತ ಮಾಲಿಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೂಮ್ಮೆ ಸತತ 4 ಎಸೆತಗಳಲ್ಲಿ 4 ವಿಕೆಟ್‌ ಹಾರಿಸಿ ಸುದ್ದಿಯಾಗಿದ್ದಾರೆ.

Advertisement

ನ್ಯೂಜಿಲ್ಯಾಂಡ್‌ ವಿರುದ್ಧ ಇಲ್ಲಿ ನಡೆದ‌ ಶುಕ್ರವಾರದ 3ನೇ ಟಿ20 ಪಂದ್ಯದಲ್ಲಿ ಅವರು ಈ ಪರಾಕ್ರಮ ತೋರಿದರು.ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 8 ವಿಕೆಟಿಗೆ 125 ರನ್‌ ಗಳಿಸಿತ್ತು. ಬಳಿಕ ಬೌಲಿಂಗ್‌ ದಾಳಿಗಿಳಿದ ಮಾಲಿಂಗ 2ನೇ ಓವರ್‌ನ 3ರಿಂದ 6ನೇ ಎಸೆತಗಳಲ್ಲಿ ಸತತವಾಗಿ ವಿಕೆಟ್‌ ಕಬಳಿಸುತ್ತ ಹೋದರು. ಈ ವೇಳೆ ಮಾಲಿಂಗ ಬಲೆಗೆ ಬಿದ್ದವರೆಂದರೆ ಮುನ್ರೊ, ರುದರ್‌ಫೋರ್ಡ್‌, ಗ್ರ್ಯಾಂಡ್‌ಹೋಮ್‌ ಮತ್ತು ರಾಸ್‌ ಟಯ್ಲರ್‌. ಮಾಲಿಂಗ ಬೌಲಿಂಗ್‌ ಹೀಗಿತ್ತು: 4-1-6-5. ಈ ಪಂದ್ಯವನ್ನು ಲಂಕಾ 37 ರನ್ನುಗಳಿಂದ ಗೆದ್ದಿತು. ನ್ಯೂಜಿಲ್ಯಾಂಡ್‌ 88ಕ್ಕೆ ಆಲೌಟ್‌ ಆಯಿತು.

ಇದಕ್ಕೂ ಮುನ್ನ 2007ರ ಏಕದಿನ ವಿಶ್ವಕಪ್‌ ಕೂಟದ ಸೂಪರ್‌-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಾಲಿಂಗ ಮೊದಲ ಸಲ ಈ ಸಾಧನೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next