Advertisement
ಸಲ್ಮಾನ್ ರೆಹಮಾನ್ ಖಾನ್ (Salman Rehman Khan) ನಿಷೇಧಿತ ಭಯೋ*ತ್ಪಾದಕ ಸಂಘಟನೆಯ ಸದಸ್ಯ ಎಂದು ಗುರುತಿಸಲಾಗಿದೆ. ಈತ ಉದ್ಯಾನ ನಗರಿ ಬೆಂಗಳೂರಿನಲ್ಲಿ ಭಯೋ*ತ್ಪಾದಕ ಚಟುವಟಿಕೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರ, ಸ್ಫೋಟಕಗಳು ಹಾಗೂ ಮದ್ದುಗುಂಡುಗಳನ್ನು ಸರಬರಾಜು ಮಾಡಿರುವುದಾಗಿ ವರದಿ ತಿಳಿಸಿದೆ.
Related Articles
Advertisement
ಉ*ಗ್ರ ಸಲ್ಮಾನ್ ರೆಹಮಾನ್ ಖಾನ್ ನನ್ನು ಗುರುವಾರ ಬೆಳಗ್ಗೆಯೇ ರುವಾಂಡದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದ್ದು, ಎನ್ ಐಎ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿರುವುದಾಗಿ ಮೂಲಗಳು ತಿಳಿಸಿವೆ.
2020ರಿಂದ ಈವರೆಗೆ ಎನ್ ಐಎ ಭಯೋ*ತ್ಪಾದಕ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಗಡಿಪಾರು ಮಾಡುವಲ್ಲಿ ಯಶಸ್ವಿಯಾಗಿದ್ದು, ಇದು 17ನೇ ಪ್ರಕರಣವಾಗಿದೆ ಎಂದು ವರದಿ ವಿವರಿಸಿದೆ.
ಬೆಂಗಳೂರಿನಲ್ಲಿ ಭಯೋ*ತ್ಪಾದನೆ ಸಂಚು ರೂಪಿಸಿದ ಆರೋಪದ ಮೇಲೆ ಹೆಬ್ಬಾಳ ಪೊಲೀಸರು ಸಲ್ಮಾನ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಎನ್ ಐಎ ಮನವಿಯಂತೆ ಸಿಬಿಐ, ಉ*ಗ್ರ ಖಾನ್ ವಿರುದ್ಧ ಇಂಟರ್ ಪೋಲ್ ರೆಡ್ ನೋಟಿಸ್ ಜಾರಿಗೊಳಿಸುವಲ್ಲಿ ಸಫಲವಾಗಿತ್ತು.
ತನಿಖೆಯ ಜಾಡು ಹಿಡಿದು ಹೊರಟಿದ್ದ ಎನ್ ಐಎ, ಇಂಟರ್ ಪೋಲ್, ಸಿಬಿಐಗೆ ಸಲ್ಮಾನ್ ರುವಾಂಡದಲ್ಲಿ ಇದ್ದಿರುವುದನ್ನು ಪತ್ತೆ ಮಾಡಿತ್ತು. ಕೊನೆಗೂ ಗುರುವಾರ (ನ.28) ಎನ್ ಐಎ ಭದ್ರತಾ ಪಡೆ ಭಾರತಕ್ಕೆ ಕರೆ ತಂದಿದೆ.
ಇಂಟರ್ ಪೋಲ್ ನೆರವಿನಿಂದ 2024ರಲ್ಲಿ ತಲೆಮರೆಸಿಕೊಂಡಿದ್ದ 26 ಆರೋಪಿಗಳನ್ನು ಭಾರತಕ್ಕೆ ಕರೆತರಲಾಗಿದೆ. ಕೋರ್ಟ್ ಗೆ ಕರೆದೊಯ್ಯುವ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದ ಉ*ಗ್ರ ಸಲ್ಮಾನ್ ನನ್ನು ಮತ್ತೆ ಬಂಧಿಸಿ ಕರೆ ತಂದಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ವರದಿ ತಿಳಿಸಿದೆ.