ವಝಿರಿಸ್ತಾನ್(ಪಾಕಿಸ್ತಾನ): ಭಾರತ ವಿರೋಧಿ ಭಯೋತ್ಪಾದಕ ಚಟುವಟಿಕೆಯಲ್ಲಿ ಶಾಮೀಲಾಗಿದ್ದ ಮತ್ತೋರ್ವ ಕುಖ್ಯಾತ ಉಗ್ರನನ್ನು ವಿದೇಶಿ ನೆಲದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ವಝಿರಿಸ್ತಾನದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Sandalwood; ಪ್ರಿಯಾಂಕಾ ಉಪೇಂದ್ರ ಹೊಸ ಹಾರರ್ ಸಿನಿಮಾ ‘ಕ್ಯಾಪ್ಚರ್’
ಲಷ್ಕರ್ ಇ ಜಬ್ಬಾರ್ ಉಗ್ರ ಸಂಘಟನೆಯ ಸ್ಥಾಪಕ, ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ನ ನಿಕಟವರ್ತಿ ದಾವೂದ್ ಮಲಿಕ್ ನನ್ನು ಉತ್ತರ ಪಾಕಿಸ್ತಾನದ ವಝಿರಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳ ಗುಂಡಿನ ದಾಳಿಗೆ ಬಲಿಯಾಗಿರುವುದಾಗಿ ವರದಿ ವಿವರಿಸಿದೆ.
ವರದಿಯ ಪ್ರಕಾರ, ಉತ್ತರ ಪಾಕಿಸ್ತಾನದ ವಝಿರಿಸ್ತಾನದ ಮಿರಾಲಿ ಪ್ರದೇಶದಲ್ಲಿ ದಾವೂದ್ ಮಲಿಕ್ ನನ್ನು ಮುಸುಕುಧಾರಿ ಗನ್ ಮ್ಯಾನ್ ವ್ಯಕ್ತಿಗಳು ಗುಂಡು ಹಾರಿಸಿ ಹತ್ಯೆಗೈದಿರುವುದಾಗಿ ತಿಳಿಸಿದೆ. ಖಾಸಗಿ ಕ್ಲಿನಿಕ್ ವೊಂದಕ್ಕೆ ಮಲಿಕ್ ಆಗಮಿಸಿದ್ದ ವೇಳೆ ಬೆನ್ನಟ್ಟಿ ಬಂದಿದ್ದ ಹಂತಕರು ಏಕಾಏಕಿ ದಾಳಿ ನಡೆಸಿ ಪರಾರಿಯಾಗಿರುವುದಾಗಿ ಹೇಳಿದೆ.
ಈ ಘಟನೆ ಪಾಕಿಸ್ತಾನದೊಳಗೆ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ನಡುವಿನ ಆಂತರಿಕ ಕಲಹದ ಪ್ರಶ್ನೆಯನ್ನು ಹುಟ್ಟುಹಾಕಿರುವುದಾಗಿ ಎಂದು ವಿಶ್ಲೇಷಿಸಲಾಗುತ್ತಿದೆ.
ತೀವ್ರಗಾಮಿ ಸಿದ್ಧಾಂತಗಳನ್ನು ಬೆಂಬಲಿಸುವ ಲಷ್ಕರ್ ಎ ಜಬ್ಬಾರ್ ಭಯೋತ್ಪಾದಕ ಸಂಘಟನೆ ಹಲವಾರು ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿತ್ತು ಎಂದು ವರದಿ ತಿಳಿಸಿದೆ.