Advertisement

ಲಷ್ಕರ್‌ ಬೆಂಬಲಿಸಿ ಬೆದರಿಕೆ ಪ್ರಕರಣ ; 3 ತಂಡಗಳಿಂದ ತನಿಖೆ

12:49 AM Nov 29, 2020 | mahesh |

ಮಂಗಳೂರು: ನಗರದ ಅಪಾರ್ಟ್‌ಮೆಂಟ್‌ನ ಆವರಣ ಗೋಡೆ ಮೇಲೆ ಲಷ್ಕರ್‌-ಎ-ತಯ್ಯಬಾ ಮತ್ತು ತಾಲಿಬಾನಿ ಉಗ್ರ ಸಂಘಟನೆಗಳನ್ನು ಬೆಂಬಲಿಸಿದ ಬೆದರಿಕೆ ಬರಹ ಕಾಣಿಸಿಕೊಂಡ ಪ್ರಕರಣದ ಬಗ್ಗೆ ಇದೀಗ ಮೂರು ಪ್ರತ್ಯೇಕ ಪೊಲೀಸ್‌ ತಂಡಗಳು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿವೆ.

Advertisement

ಕದ್ರಿ ಠಾಣೆ ವ್ಯಾಪ್ತಿಯ ಬಿಜೈ ಬಟ್ಟಗುಡ್ಡ ಸಮೀಪ ಕದ್ರಿ ಕಂಬಳ ಕಡೆಗೆ ತಿರುಗುವಲ್ಲಿರುವ ಬಹು ಮಹಡಿ ಕಟ್ಟಡದ ಆವರಣ ಗೋಡೆಯಲ್ಲಿ “ಲಷ್ಕರ್‌-ಎ-ತಯ್ಯಬಾ’ ಮತ್ತು “ತಾಲಿಬಾನ್‌’ ಉಗ್ರ ಸಂಘಟನೆಗಳ ಪರ ಬರವಣಿಗೆ ಶುಕ್ರವಾರ ಬೆಳಗ್ಗೆ ಕಾಣಿಸಿಕೊಂಡಿತ್ತು.

ತನಿಖೆಗೆ ತಂಡಗಳು
ಕೇಂದ್ರ ಉಪವಿಭಾಗ ಎಸಿಪಿ ನೇತೃತ್ವದ ತಂಡ, ಕದ್ರಿ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಸವಿತ್ರ ತೇಜ ನೇತೃತ್ವದ ತಂಡ ಮತ್ತು ಸಿಸಿಬಿ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ನೇತೃತ್ವದ ತಂಡಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿವೆ.

ತಂತ್ರಜ್ಞರಿಂದ ಮಾಹಿತಿ ಸಂಗ್ರಹ
ಆರೋಪಿಗಳ ಪತ್ತೆಗೆ ತಾಂತ್ರಿಕ ತಜ್ಞರ ಸಹಾಯವನ್ನು ಕೂಡ ಪಡೆದುಕೊಳ್ಳಲಾಗುತ್ತಿದೆ. ಗೋಡೆ ಬರಹವನ್ನು ಬ್ರಷ್‌ ಬಳಕೆ ಮಾಡದೆ ಸ್ಪ್ರೆà ಮೆಷಿನ್‌ನಿಂದ ಬರೆದಿರುವ ಸಾಧ್ಯತೆಯಿದೆ. ಬ್ರಷ್‌ ಬಳಸಿದರೆ ಈ ಬರಹಕ್ಕೆ ಸುಮಾರು 30 ನಿಮಿಷ ಬೇಕಾಗುತ್ತದೆ. ಸ್ಪ್ರೆà ಬಳಸಿ 15 ನಿಮಿಷದೊಳಗೆ ಬರೆದು ಹೋಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ರಾತ್ರಿ ಗಸ್ತು ಬಿಗಿ
ಪ್ರಕರಣದ ಬಳಿಕ ಪೊಲೀಸರು ಹೆಚ್ಚು ಜಾಗೃತರಾಗಿದ್ದು, ಘಟನೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ರಾತ್ರಿ ಗಸ್ತು ಬಿಗಿಗೊಳಿಸಿದ್ದಾರೆ.

Advertisement

ಕ್ರಮಕ್ಕೆ ಆಗ್ರಹ
ದೇಶ ವಿರೋಧಿ ಕೃತ್ಯಗಳನ್ನು ಯಾರೇ ನಡೆಸಿದರೂ ಅವರನ್ನು ಪತ್ತೆಹಚ್ಚಿ ಬಂಧಿಸಿ ಕಠಿಭ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌ ಸರಕಾರವನ್ನು ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ವಿವಿಧ ಸಂಘಟನೆಗಳು, ಜನಪ್ರತಿನಿಧಿ ಗಳು, ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿ ಆದಷ್ಟು ಬೇಗ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next