Advertisement

2020ಕ್ಕೆ ಅತೀ ದೊಡ್ಡ ಟೆಲಿಸ್ಕೋಪ್‌ 

09:38 AM Dec 23, 2018 | Team Udayavani |

ಉಡುಪಿ: ಖಗೋಳ ಕುರಿತ ಮತ್ತಷ್ಟು ಅಧ್ಯಯನಕ್ಕೆ ಅನೇಕ ರಾಷ್ಟ್ರಗಳು ಒಂದಾಗಿ ಬೃಹತ್‌ ಟೆಲಿಸ್ಕೋಪ್‌ ನಿರ್ಮಿಸುತ್ತಿದ್ದು, 2020ರ ವೇಳೆಗೆ ಮೊದಲ ಹಂತದ ಕಾರ್ಯಾಚರಣೆ ಆರಂಭಿಸಲಿದೆ ಎಂದು ಬೆಂಗಳೂರು ರಾಮನ್‌ ಸಂಶೋಧನ ಸಂಸ್ಥೆಯ ವಿಜ್ಞಾನಿ ಪ್ರೊ| ಉದಯಶಂಕರ್‌ ಎನ್‌. ತಿಳಿಸಿದರು.

Advertisement

ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಭೌತಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ “ಜರ್ನಿ ಅಫ್ ಟೆಲಿಸ್ಕೋಪ್ಸ್‌’ ಎಂಬ ಕಾರ್ಯಾಗಾರ ದಲ್ಲಿ ಶನಿವಾರ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಹಿಮಾಲಯ ಸಮೀಪ ಸಂಶೋಧನೆ 
ರಾಮನ್‌ ಸಂಶೋಧನ ಸಂಸ್ಥೆ ಬಾಹ್ಯಾಕಾಶ ರೇಡಿಯೇಷನ್‌ ಬಗ್ಗೆ ತನ್ನದೇ ಟೆಲಿಸ್ಕೋಪ್‌ನಲ್ಲಿ ಸಂಶೋಧನೆ ನಡೆಸುತ್ತಿದೆ ಎಂದು ಉದಯಶಂಕರ್‌ ತಿಳಿಸಿದರು.

ಆಳವಾದ ಅಧ್ಯಯನ ಅವಶ್ಯ
ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳಿಗೆ ಖಗೋಳ, ವಿಶ್ವರೂಪ ಕುರಿತ ವಿಶೇಷ ಜ್ಞಾನ ನೀಡುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಅಮೆರಿಕದ “ಸ್ಮಿತ್‌ಸೋನಿಯನ್‌ ಸೆಂಟರ್‌ ಫಾರ್‌ ಆಸ್ಟ್ರೋಫಿಸಿಕ್ಸ್‌’ನ ಡಾ| ವಿನಯ್‌ ಎಲ್‌. ಕಶ್ಯಪ್‌ ಮಾಹಿತಿ ನೀಡಿದರು. ಪ್ರಾಂಶುಪಾಲ ಡಾ| ಬಿ. ಜಗದೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ರಾಧಾಕೃಷ್ಣ ಆಚಾರ್ಯ, ಡಾ| ಎ.ಪಿ. ರಾಧಾಕೃಷ್ಣ, ಡಾ| ಜಿ.ಎಸ್‌. ಚಂದ್ರಶೇಖರ್‌ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ಖಗೋಳ ವಿಜ್ಞಾನ ಕ್ಯಾಲೆಂಡರನ್ನು ಶ್ರೀಗಳು ಅನಾವರಣಗೊಳಿಸಿದರು. ಡಾ| ವಿನಯ್‌ ಎಲ್‌. ಕಶ್ಯಪ್‌ ಅವರು ಹೊಸ ಮಾದರಿಯ ಟೆಲಿಸ್ಕೋಪನ್ನು ಶ್ರೀಗಳಿಗೆ ನೀಡಿದರು.
ಡಾ| ಎ.ಪಿ. ಭಟ್‌ ಸ್ವಾಗತಿಸಿದರು. ದಿನೇಶ್‌ ಹೆಬ್ಟಾರ್‌ ನಿರ್ವಹಿಸಿದರು. ಸುಹಾಸ್‌ ರಾವ್‌ ವಂದಿಸಿದರು. 

Advertisement

ಕಂಡದ್ದು ಶೇ. 0.1!
13.7 ಬಿಲಿಯ ವರ್ಷಗಳ ಹಿಂದೆ ಸೃಷ್ಟಿಯಾದ ಈ ವಿಶ್ವರೂಪದ ಶೇ. 0.1ರಷ್ಟನ್ನು ನೋಡಲು ಮಾತ್ರ ಇದುವರೆಗೆ ಸಾಧ್ಯವಾಗಿದೆ. 400 ಮಿಲಿಯ ವರ್ಷಗಳ ವರೆಗೆ ನಕ್ಷತ್ರ, ಗ್ಯಾಲಕ್ಷಿಗಳು ಇರಲಿಲ್ಲ. ಅನಂತರವೇ ಹುಟ್ಟಿದವು. ಇವು ಹುಟ್ಟುವಾಗ ಹೇಗಿತ್ತು ಎಂಬು ದನ್ನು ಅರಿಯುವ ಕೆಲಸ, ಇತರ ಯಾವುದಾದರೊಂದು “ಯುನಿವರ್ಸ್‌’ನ್ನು ಅರಿಯುವಲ್ಲಿ ರಾಮನ್‌ ಇನ್‌ಸ್ಟಿಟ್ಯೂಟ್‌ ಕೂಡ ಪ್ರಯತ್ನಿಸುತ್ತಿದೆ. ಈ ಉದ್ದೇಶವುಳ್ಳ ಬೇರೆ ದೇಶಗಳ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ ಎಂದು ಪ್ರೊ| ಉದಯ ಶಂಕರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next