Advertisement

ಸಿದ್ಧಗೊಂಡಿದೆ ಅತೀ ದೊಡ್ಡ ರೈಲ್ವೇ ಸುರಂಗ

11:04 PM Feb 16, 2022 | Team Udayavani |

ದೇಶದ ರೈಲ್ವೇ ವಲಯದಲ್ಲಿಯೇ ಅತ್ಯಂತ ಉದ್ದದ ಸುರಂಗ ಮಾರ್ಗದ ಕೆಲಸದ ಒಂದು ಹಂತ ಮಂಗಳವಾರ ಯಶಸ್ವಿಯಾಗಿ ಪೂರ್ತಿ­ಯಾಗಿದೆ.

Advertisement

ಉಧಂಪುರ- ಶ್ರೀನಗರ- ಬಾರಾಮುಲ್ಲಾ ರೈಲು ಮಾರ್ಗ (ಯುಎಸ್‌ಬಿಆರ್‌ಎಲ್‌) ದ ಭಾಗವೇ ಆಗಿರುವ ಈ ಟನೆಲ್‌ ಸುಂಬರ್‌ ಮತ್ತು ಅರ್ಪಿಂಚಲ ನಡುವೆ ಹಳಿ ಹಾಕಲು ನೆರವಾಗುತ್ತದೆ. 11.2 ಕಿ.ಮೀ. ದೂರದ ಪೀರ್‌ ಪಂಜಾಲ್‌ ಟನೆಲ್‌ ಇದೇ ಮಾರ್ಗದ ಎರಡನೇ ಅತೀ ದೊಡ್ಡ ಸುರಂಗ ಮಾರ್ಗವಾಗಿದೆ
ಎಂದು ಉತ್ತರ ರೈಲ್ವೇ ವಲಯ ಪ್ರಕಟಿಸಿದೆ.

ಸುರಂಗದ ವಿಶೇಷತೆ ಏನು?
– ಪ್ರಧಾನವಾಗಿ ರೈಲು ಸಂಚರಿಸಲು ಇರುವ ಟನೆಲ್‌
– ಎರಡನೇಯದ್ದು ತುರ್ತು ಪರಿಸ್ಥಿತಿಯಲ್ಲಿ ಸಂಚರಿಸಲು ಇರಬೇಕಾದ ವ್ಯವಸ್ಥೆ
– ಪ್ರತೀ 375 ಮೀಟರ್‌ಗೆ ರಕ್ಷಣೆ, ಪರಿಹಾರ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಕ್ರಮ
– ಸುರಂಗದಲ್ಲಿ ಕಾಮಗಾರಿ ಮುಕ್ತಾಯಗೊಂಡ ಬಳಿಕ ಪ್ರತಿ ಗಂಟೆಗೆ 100 ಕಿಮೀ ವೇಗದಲ್ಲಿ ರೈಲು ಸಂಚರಿಸುವಂತೆ ವಿನ್ಯಾಸ

ಹೊಸ ತಂತ್ರಜ್ಞಾನದ ಬಳಕೆ
ನ್ಯೂ ಆಸ್ಟ್ರಿಯನ್‌ ಟನೆಲಿಂಗ್‌ ಮೆಥಡ್‌ (ಎನ್‌ಎಟಿಎಂ) ಅನ್ನು ಬಳಕೆ ಮಾಡಿಕೊಂಡು ಕಾಮಗಾರಿ ನಡೆಸಲಾಗಿದೆ. ಅದರಲ್ಲಿ ಡ್ರಿಲ್ಲಿಂಗ್‌ (ಕೊರೆಯುವಿಕೆ),ಸ್ಫೋಟ (ಬ್ಲಾಸ್ಟಿಂಗ್‌) ಮೂಲಕ ಕೆಲಸ ಮಾಡಲಾಗುತ್ತದೆ. ಕುದುರೆಯ ಲಾಳದ‌ಂತೆ ಸುರಂಗ ಕೊರೆಯಲಾಗಿದೆ. ಅದರಲ್ಲಿ ಸೀಕ್ವೆನ್ಶಿಯಲ್‌ ಎಕ್ಸ್‌ಕವೇಷನ್‌ ಮೆಥಡ್‌ ಬಳಕೆ ಮಾಡಿಕೊಂಡು ಸುರಂಗದ ಗೋಡೆಗಳನ್ನು ಸದೃಢವಾಗಿ ಇರುವಂತೆ ಕೊರೆಯಲಾಗಿದೆ.

ಯಾವ ಯೋಜನೆಯ ಭಾಗ?
ಉಧಂಪುರ- ಶ್ರೀನಗರ- ಬಾರಾಮುಲ್ಲಾ ರೈಲು ಮಾರ್ಗ (ಯುಎಸ್‌ಬಿಆರ್‌ಎಲ್‌)ದ ಒಂದು ಭಾಗ. ಒಟ್ಟು 272 ಕಿ.ಮೀ. ಉದ್ದ ಈ ಯೋಜನೆಯ ಪೈಕಿ 161 ಕಿ.ಮೀ. ದೂರದ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. ಕಟ್ರಾದಿಂದ ಬನಿಹಾಲ್‌ ನಡುವಿನ 111 ಕಿ.ಮೀ. ದೂರದ ಮಾರ್ಗದ ಕಾಮಗಾರಿ ಅತ್ಯಂತ ಸವಾಲಿನದ್ದು. 2020ರಲ್ಲಿ ಕೇಂದ್ರ ಸರಕಾರ ಈ ಮಾರ್ಗವನ್ನು ಕುಪ್ವಾರಾಕ್ಕೆ ವಿಸ್ತರಿಸಲು ನಿರ್ಧಾರ ಕೈಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next