Advertisement

ಧರಾಶಾಹಿಯಾದ ಬೃಹತ್‌ ಮರ

04:59 PM Nov 21, 2021 | Team Udayavani |

ಹಾಸನ: ಕಳೆದ ಎರಡು ವಾರಗಳಿಂದ ನಿರಂತರ ಮಳೆಯಿಂದಾಗ ರಸ್ತೆ ಬದಿಯ ಬೃಹತ್‌ ಮರ ಬೇರು ಸಹಿತ ರಸ್ತೆಗೆ ಬಿದ್ದಿರುವ ಘಟನೆ ಶನಿವಾರ ಬೆಳಗ್ಗೆ ನಗರದಲ್ಲಿ ಸಂಭವಿಸಿದೆ. ಕೆ.ಆರ್‌.ಪುರಂ. ಸ್ವಪ್ನ ಸಾಗರ್‌ ಹೋಟೆಲ್‌ ಸಮೀಪದ 9ನೇ ಅಡ್ಡ ರಸ್ತೆ ಕ್ರಾಸ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎದುರು ಇರುವ ಹಳೆಯದಾದ ಮರವೊಂದು ಧರೆಗೆ ಉರುಳಿದೆ.

Advertisement

ಮಳೆಯಿಂದಾಗಿ ಮರದ ಬೇರುಗಳು ಸಡಿಲಗೊಂಡು ಮರವು ಧರಾಶಾಹಿಯಾಗಿದೆ. ಆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಬ್ಬರು ಮರ ಬೀಳುವ ಸಂದರ್ಭದಲ್ಲಿ ಕ್ಷಣಾರ್ಧದಲ್ಲಿ ಬಚಾವಾದರು ಎಂದು ಪತ್ಯಕ್ಷದರ್ಶಿಗಳು ತಿಳಿಸಿದರು.

ನಗರಸಭೆ 9ನೇ ವಾರ್ಡಿನ ಸದಸ್ಯ ಸಂತೋಷ್‌ ಮಾತನಾಡಿ, ನಗರಸಭೆಯ ಅಧ್ಯಕ್ಷರು ಮತ್ತು ಆಯುಕ್ತರು ಹಾಗೂ ಸದಸ್ಯರು ಸೇರಿ ಸಭೆ ನಡೆಸಿ ನಗರ ಸಭೆ ವ್ಯಾಪ್ತಿಯಲ್ಲಿರುವ ಹಳೆ ಮರಗಳು ಅಪಾಯದ ಸ್ಥಿತಿಯಲ್ಲಿದೆ ಅದನ್ನು ಗುರುತಿಸಿ ತೆರವು ಮಾಡುವ ಬಗ್ಗೆ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೇ ಇದುವರೆಗೂ ಅಪಾಯ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸದೆ ಅರಣ್ಯ ಇಲಾಖೆ ನಿರ್ಲಕ್ಷ್ಯ ಪ್ರದರ್ಶಿಸಿದೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next