ಉಕ್ರೇನ್ ವಿರುದ್ಧ ಸತತವಾಗಿ ದಾಳಿ ನಡೆಸುತ್ತಿರುವ ರಷ್ಯಾವನ್ನು ಇಸ್ರೇಲ್‌ನ ವಿದೇಶಾಂಗ ಸಚಿವ ಯೈರ್ ಲ್ಯಾಪಿಡ್ ಭಾನುವಾರ ಖಂಡಿಸಿದ್ದಾರೆ.
ರಷ್ಯಾ ಕೂಡಲೇ ದಾಳಿ ನಿಲ್ಲಿಸಬೇಕು ಮತ್ತು ಯುದ್ಧವನ್ನು ಅಂತ್ಯ ಮಾಡಬೇಕು ಎಂದು ಅವರು ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಇಸ್ರೇಲ್ ಬಲವಾಗಿ ರಷ್ಯಾದ ಬಗ್ಗೆ ವಿರೋಧ ವ್ಯಕ್ತಪಡಿಸಿದೆ.
ಇದನ್ನೂ ಓದಿ:ದೇಶದಲ್ಲಿ ಚಿನ್ನದ ಆಮದು ಪ್ರಮಾಣ ಶೇ.73 ಏರಿಕೆ
ಹಾಗಿದ್ದರೂ ಇಸ್ರೇಲ್‌ನ ಪ್ರಧಾನಿ ನಫ್ತಾಲಿ ಬೆನ್ನೆಟ್ ಅವರು ರಷ್ಯಾದ ಬಗ್ಗೆ ಯಾವುದೇ ಮಾತನ್ನಾಡಿಲ್ಲ. ಸಿರಿಯಾ ದಲ್ಲಿ ರಕ್ಷಣಾ ಸಮನ್ವಯಕ್ಕಾಗಿ ಇಸ್ರೇಲ್ ರಷ್ಯಾದ ಮೇಲೆ ಅವಲಂಬಿತವಾಗಿದೆ. ಆ ಹಿನ್ನೆಲೆ ಇಸ್ರೇಲ್, ರಷ್ಯಾವನ್ನು ಎದುರು ಹಾಕಿಕೊಳ್ಳಲು ಯೋಚಿಸುತ್ತಿದೆ.