Advertisement

Laos; 47 ಸೈಬರ್‌ ಗುಲಾಮರ ರಕ್ಷಿಸಿದ ಕೇಂದ್ರ ಸರಕಾರ

12:49 AM Sep 01, 2024 | Team Udayavani |

ಹೊಸದಿಲ್ಲಿ: ಲಾವೋಸ್‌ನ ಸೈಬರ್‌ ವಂಚನಾ ಕೇಂದ್ರಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ 47 ಭಾರತೀಯರನ್ನು ರಕ್ಷಿಸಿರುವುದಾಗಿ ಭಾರತೀಯ ರಾಯಭಾರ ಕಚೇರಿ ಶನಿವಾರ ತಿಳಿಸಿದೆ. ಈ ಪೈಕಿ 29 ಮಂದಿ ರಾಯಭಾರ ಕಚೇರಿಯ ಸುಪರ್ದಿಯಲ್ಲಿದ್ದು, ಇನ್ನುಳಿದ 18 ಜನ ರಕ್ಷಣೆಗಾಗಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ.

Advertisement

ಉದ್ಯೋಗಕ್ಕಾಗಿ ಲಾವೋಸ್‌ಗೆ ತಲುಪುವವರ ಪಾಸ್‌ಪೋರ್ಟ್‌ಗಳನ್ನು ಕಸಿಯುತ್ತಿದ್ದ ವಂಚಕರು, ಡೇಟಿಂಗ್‌ ಆ್ಯಪ್‌ಗ್ಳ ಮೂಲಕ ವಂಚನೆ ನಡೆಸುವಂತೆ ಟಾರ್ಗೆಟ್‌ ನೀಡುತ್ತಿದ್ದವು. ನಿಗದಿತ ಗುರಿ ಮುಟ್ಟದಿ­ದ್ದಲ್ಲಿ ಶಿಕ್ಷಿಸುತ್ತಿದ್ದವು. ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಆಗ್ನೇಯ ಏಷ್ಯಾ ರಾಷ್ಟ್ರಗಳ ಭೇಟಿ ನೀಡಿ­ದ್ದಾಗ ಲಾವೋಸ್‌ ಸರಕಾರದ ಜತೆಗೆ ಈ ಬಗ್ಗೆ ಚರ್ಚೆ ನಡೆಸಿದ್ದರು. ಲಾವೋಸ್‌ನಿಂದ ಇದುವರೆಗೆ ಒಟ್ಟು 635 ಮಂದಿ ಭಾರತೀಯರನ್ನು ರಕ್ಷಿಸಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.