Advertisement
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ 7 ವಿಕೆಟಿಗೆ ಗಳಿಸಿದ್ದು 107 ರನ್ ಮಾತ್ರ. ಆಸ್ಟ್ರೇಲಿಯ 18.2 ಓವರ್‌ಗಳಲ್ಲಿ 2 ವಿಕೆಟಿಗೆ 111 ರನ್ ಬಾರಿಸಿತು.
ಚೇಸಿಂಗ್ ವೇಳೆ ಆಸೀಸ್ ಅಬ್ಬರದ ಆಟಕ್ಕೆ ಮುಂದಾಗಲಿಲ್ಲ. ಅಲಿಸ್ಸಾ ಹೀಲಿ 37, ನಾಯಕಿ ಮೆಗ್ ಲ್ಯಾನಿಂಗ್ ಔಟಾಗದೆ 48, ಗಾರ್ಡನರ್ ಔಟಾಗದೆ 19 ರನ್ ಮಾಡಿದರು.ಆಸ್ಟ್ರೇಲಿಯ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡನ್ನು 97 ರನ್ನುಗಳಿಂದ ಪರಾಭವಗೊಳಿಸಿತ್ತು. ಕಾಂಗರೂ ಪಡೆಯೀಗ “ಎ’ ವಿಭಾಗದ ಅಗ್ರಸ್ಥಾನದಲ್ಲಿದೆ. ಮತ್ತೊಂದು ಅಜೇಯ ತಂಡವಾದ ಶ್ರೀಲಂಕಾ ಕೂಡ 4 ಅಂಕಗಳನ್ನು ಹೊಂದಿದ್ದು, ರನ್‌ರೇಟ್‌ನಲ್ಲಿ ಆಸ್ಟ್ರೇಲಿಯಕ್ಕಿಂತ ಹಿಂದಿದೆ. ಒಂದು ಗೆಲುವು, ಒಂದು ಸೋಲನ್ನು ಕಂಡಿರುವ ಆತಿಥೇಯ ದಕ್ಷಿಣ ಆಫ್ರಿಕಾ 3ನೇ ಸ್ಥಾನಿಯಾಗಿದೆ. ಎರಡೂ ಪಂದ್ಯಗಳನ್ನು ಸೋತ ಬಾಂಗ್ಲಾ 4ನೇ, ನ್ಯೂಜಿಲ್ಯಾಂಡ್ ಕೊನೆಯ ಸ್ಥಾನಕ್ಕೆ ಕುಸಿದಿದೆ.