Advertisement

ರಾಮನ ತೇಜಸ್ಸು-ರಾವಣನ ವರ್ಚಸ್ಸು!: ಲಂಕೆ ಬಗ್ಗೆ ನಿರ್ದೇಶಕ ರಾಮ್‌ ಪ್ರಸಾದ್‌ ಮಾತು

11:52 AM Aug 13, 2021 | Team Udayavani |

“ಲೂಸ್‌ಮಾದ’ ಖ್ಯಾತಿಯ ಯೋಗೇಶ್‌ ನಾಯಕರಾಗಿರುವ “ಲಂಕೆ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ. ಮೊದಲ ಹಂತವಾಗಿ ಚಿತ್ರದ ಹಾಡುಗಳು ಬಿಡುಗಡೆಯಾಗಿ ಹಿಟ್‌ ಲಿಸ್ಟ್‌ ಸೇರಿದರೆ, ಈಗ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ರಾಮ್‌ಪ್ರಸಾದ್‌ ನಿರ್ದೇಶಿಸಿದ್ದಾರೆ. ನಿರ್ಮಾಣದಲ್ಲೂ ಸಾಥ್‌ ನೀಡಿದ್ದಾರೆ. ಈ ಚಿತ್ರದ ಮೇಲೆ ರಾಮ್‌ ಪ್ರಸಾದ್‌ ಅವರಿಗೆ ವಿಶ್ವಾಸವಿದೆ. ಜನ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸುತ್ತಾರೆ ಎಂಬ ನಂಬಿಕೆಯೊಂದಿಗೆ ಈಗ ಬಿಡುಗಡೆಗೆ ಮುಂದಾಗಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ಅವರು, “ಚಿತ್ರಕ್ಕೆ ಲಂಕೆ ಎಂದು ಟೈಟಲ್‌ ಇಡಲು ಒಂದು ಕಾರಣವಿದೆ. ಚಿತ್ರದಲ್ಲಿನ ನಾಯಕ ಪಾತ್ರ ರಾಮ ಮತ್ತು ರಾವಣನನ್ನು ಹೋಲುತ್ತದೆ. ಹೀಗಾಗಿ ರಾಮನ ತೇಜಸ್ಸು, ರಾವಣನ ವರ್ಚಸ್ಸು ಇದೆ. ಸನ್ನಿವೇಶಕ್ಕೆ ತಕ್ಕಂತೆ ನಾಯಕನ ಪಾತ್ರ ಬದಲಾಗುತ್ತಾ ಸಾಗುತ್ತದೆ. ಲೂಸ್‌ ಮಾದ ಯೋಗಿ ಅವರ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿರಬೇಕೆಂದು ಅವರಿಗೆ ಈ ಸಿನಿಮಾದಲ್ಲಿ ಸಾಕಷ್ಟು ಬದಲಾವಣೆ ಕೂಡಾ ಮಾಡಿದ್ದೇವೆ. ಇಡೀ ಸಿನಿಮಾ ಕಲರ್‌ಫ‌ುಲ್‌ ಆಗಿದೆ’ ಎನ್ನುತ್ತಾರೆ ರಾಮ್‌ ಪ್ರಸಾದ್‌.

ಇದನ್ನೂ ಓದಿ:ಹಾಡುಗಳಲ್ಲಿ ಕೇಳುಗರ ಗಮನ ಸೆಳೆದ “ಗ್ರೂಫಿ’: ಆ.20ಕ್ಕೆ ರಿಲೀಸ್‌

ಎಲ್ಲಾ ಓಕೆ, ಈ ಸಿನಿಮಾದ ಹೈಲೈಟ್‌ಗಳೇನು ಎಂದರೆ ನಿರ್ದೇಶಕ ರಾಮ್‌ಪ್ರಸಾದ್‌ ಒಂದಷ್ಟು ಅಂಶಗಳನ್ನು ಪಟ್ಟಿ ಮಾಡುತ್ತಾರೆ. “ಮುಖ್ಯವಾಗಿ ಇದು ನೈಜ ಘಟನೆಯಿಂದ ಪ್ರೇರಿತವಾದ ಸಿನಿಮಾ. ಇಲ್ಲಿ ಯಾವ ಅಂಶವೂ ಅನಾವಶ್ಯಕವಾಗಿ ಬರೋದಿಲ್ಲ. ಕತೆಯ ಆಶಯಕ್ಕೆ ತಕ್ಕಂತೆ ಎಲ್ಲವೂ ನಡೆಯುತ್ತದೆ. ಮೊದಲೇ ಹೇಳಿದಂತೆ ಇಲ್ಲಿ ಯೋಗಿ ಅವರ ಲುಕ್‌, ಮ್ಯಾನರಿಸಂ, ಡೈಲಾಗ್‌ ಡೆಲಿವರಿ ಎಲ್ಲವೂ ಭಿನ್ನವಾಗಿದೆ. ಮತ್ತೂಂದು ಅಂಶವೆಂದರೆ ಇದು ಅದ್ಧೂರಿ ಸಿನಿಮಾ. ಸಾಕಷ್ಟು ಮಂದಿ ಪ್ರಮುಖ ಕಲಾವಿದರು ನಟಿಸಿದ್ದಾರೆ’ ಎನ್ನುತ್ತಾರೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳನ್ನು ಮಾಡುವ ಆಲೋಚನೆ ರಾಮ್‌ ಪ್ರಸಾದ್‌ ಅವರಿಗಿದೆ. ಈ ಬಗ್ಗೆ ಮಾತನಾಡುವ ಅವರು, “ಫ‌ಲಿತಾಂಶದ ಪ್ರೇಕ್ಷಕರಿಗೆ ಬಿಟ್ಟಿದ್ದು. ಆದರೆ. ನಾನು ಸಿನಿಮಾ ನಿರ್ದೇಶನ, ನಿರ್ಮಾಣ ಮಾಡುವುದನ್ನು ಮುಂದುವರೆಸುತ್ತೇನೆ. ಒಂದು ಸಿನಿಮಾಕ್ಕೆ ಏನು ಬೇಕು ಅಂತ ಈಗ ಗೊತ್ತಾಗಿದೆ. ಅದನ್ನು ಶ್ರದ್ಧೆಯಿಂದ ಕಟ್ಟಿಕೊಡುತ್ತೇನೆ’ ಎಂದು ವಿಶ್ವಾಸದಿಂದ ಹೇಳುತ್ತಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next