Advertisement

ಆಗಸ್ಟ್‌ನಲ್ಲಿ ಲಂಕಾ ಪ್ರೀಮಿಯರ್‌ ಲೀಗ್‌?

10:17 PM Jul 02, 2020 | Sriram |

ಕೊಲಂಬೊ: ಶ್ರೀಲಂಕಾ ತನ್ನ ಚೊಚ್ಚಲ ಟಿ20 ಕ್ರಿಕೆಟ್‌ ಲೀಗ್‌ ಆರಂಭಿಸುವ ಸಿದ್ಧತೆಯಲ್ಲಿದೆ. ಇದಕ್ಕಾಗಿ ಆ. 8ರಿಂದ ಆ. 22ರ ವರೆಗಿನ ದಿನಾಂಕವನ್ನು ಕಾದಿರಿಸಿದೆ.

Advertisement

ಲಂಕಾ ಪ್ರೀಮಿಯರ್‌ ಲೀಗ್‌ (ಎಲ್‌ಪಿಎಲ್‌) ಆಯೋಜನೆಗೆ ಕ್ರೀಡಾ ಸಚಿವಾಲಯದಿಂದ ಅನುಮತಿ ಕೂಡ ಲಭಿಸಿದೆ. ಆದರೆ ವಿದೇಶಿಗರಿಗೆ ಶ್ರೀಲಂಕಾದ ಬಾಗಿಲು ಯಾವಾಗ ತೆರೆಯಲಿದೆ ಎಂಬುದರ ಮೇಲೆ ಈ ಕೂಟದ ಭವಿಷ್ಯ ನಿಂತಿದೆ.

ಕೋವಿಡ್‌-19 ಕಾರಣದಿಂದ ಜುಲೈ ಅಂತ್ಯದ ತನಕ ಲಂಕೆಯ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಮುಚ್ಚಿರುತ್ತವೆ. ಆಗಸ್ಟ್‌ ನಲ್ಲಿ ಪರಿಸ್ಥಿತಿ ಹೇಗೆ ನಿಲ್ಲುತ್ತದೆ ಎಂಬು ದನ್ನು ಕಾದು ನೋಡಬೇಕಿದೆ.

ವಿದೇಶಿಗರು ಹೆದರಬೇಕಿಲ್ಲ
ಶ್ರೀಲಂಕಾ ಕೋವಿಡ್‌-19 ನಿಯಂತ್ರಣದಲ್ಲಿ ಹೆಚ್ಚಿನ ಯಶಸ್ಸು ಕಂಡಿದೆ. ಈವರೆಗೆ ಕೇವಲ 2 ಸಾವಿರದಷ್ಟು ಸೋಂಕಿತರು ಮಾತ್ರ ಕಾಣಿಸಿಕೊಂಡಿದ್ದಾರೆ. ಇವರಲ್ಲಿ 1,700 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಲಂಕೆಗೆ ಆಗಮಿಸಲು ವಿದೇಶಿಗರು ಭೀತಿಪಡಬೇಕಾದ ಅಗತ್ಯವಿಲ್ಲ. ಇದರಿಂದ ಎಲ್‌ಪಿಎಲ್‌ಗೆ ಯಾವುದೇ ಅಡ್ಡಿಯಾಗದು ಎಂಬುದು ಲಂಕಾ ಕ್ರಿಕೆಟ್‌ ಮಂಡಳಿಯ ವಿಶ್ವಾಸ.

“ಈ ಪಂದ್ಯಾವಳಿಯ ಕುರಿತು ನಾವು ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ ಅವ ರೊಂದಿಗೆ ಮಾತುಕತೆ ನಡೆಸಲಿದ್ದೇವೆ. ಅನಂತರವೇ ನಿರ್ಧಾರವೊಂದಕ್ಕೆ ಬರಲು ಸಾಧ್ಯ’ ಎಂಬುದಾಗಿ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next