Advertisement
ಈ ವಿಶಿಷ್ಟ ಯಕ್ಷಗಾನದ ಹಿನ್ನಲೆಯ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಕಲಾ ಮಾಧ್ಯಮದ ಕಲಿಕೆಯ ಭಾಗವಾಗಿ ಮೂಡಿಬಂತು.ವಿದ್ಯಾವಾಚಸ್ಪತಿ ವಿ.ಉಮಾಕಾಂತ ಭಟ್ಟ ಕೆರೇಕೈ ಕರ್ಣ ಹಾಗೂ ಕೃಷ್ಣನ ಪಾತ್ರದ ಮೂಲಕ ಭಾಷೆಯ ಭಾವಯಾನದ ಅನಾವರಣ ಮಾಡಿಕೊಟ್ಟರು.ಕರ್ಣಬೇಧನ ಪ್ರಸಂಗದ ಪದ್ಯಗಳ ಮೂಲಕ ಕಥೆ ಕಟ್ಟಿಕೊಡುವಲ್ಲಿ ಭಾಗವತ ಗಜಾನನ ತುಳಗೇರಿ, ಮದ್ದಲೆಯಲ್ಲಿ ಶ್ರೀಪಾದ ಮೂಡಗಾರ ನೆರವಾದರು.
Related Articles
Advertisement
ಭಾರತದಲ್ಲಿ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರ ಕೂಡ ಹೃದಯವಂತರನ್ನಾಗಿಸುವಲ್ಲಿ ಪ್ರೇರೇಪಿಸುತ್ತದೆ. ಭಾಷೆ, ಕಲಿಕೆ, ದೇಶದ ಸಂಸ್ಕೃತಿ ಮೂಲಕ ಹೃದಯ ಶ್ರೀಮಂತಿಕೆಗೊಳಿಸಿಕೊಳ್ಳಬೇಕು ಎಂದರು. ಅಮೇರಿಕಾ ಎಷ್ಟೇ ದೊಡ್ಡದಾದರೂ ಹೃದಯವಂತಿಕೆ ಇಟ್ಟು ಕೊಳ್ಳದೇ ಹೋದರೆ ಪ್ರಯೋಜನ ಇರದು ಎಂದ ಅವರು,ಕಲಿಸುವದು ನೆನಪಿಡಬೇಕಾದ ಶಿಕ್ಷಣದಲ್ಲಿ ಇದ್ದೇವೆ. ಆದರೆ ನೆನಪಿಡಬೇಕಾದ್ದು ಕಲಿಸುವಂತಾಗಬೇಕು.ಬೆಳೆಯುವವನಿಗೆ ನೀನು ಬೆಳೆಯಲು ಹೇಳಲು ಜನ ಬೇಕು.ಕಳೆದುಕೊಳ್ಳುತ್ತಿದ್ದೆವೆ ಎಂದು ಹೇಳುವದೂ ಹಿರಿಯರು ಬೇಕು. ಹಿರಿಯರನ್ನು ಗೌರವಿಸುವದನ್ನು ಕಲಿಯಬೇಕು ಎಂದೂ ಹೇಳಿದರು. ಕಳೆದು ಹೋದ ಕಾಲ ಮತ್ತೆ ಸಿಗುವದಿಲ್ಲ. ಶಿಕ್ಷಣ ಎಂದರೆ ಕೇವಲ ಶಾಲೆಯಲ್ಲಿ ಮಾತ್ರವಲ್ಲ. ಜೀವ ನದ ಪ್ರತಿ ಕ್ಷಣವೂ ಶಿಕ್ಷಣವೇ. ಶಿಕ್ಷಣ ಸಂಪದವಾಗಬೇಕು ಎಂದರು.
ಓದು ಆಟ ಆಗಬಾರದು.ಮುಂದಿನ ಓದು ಓದುವಾಗ ಹಿಂದಿನದ್ದು ಮರೆಯಬಾರದು. ಮನಸ್ಸನ್ನು ಹಾಗೂ ಮೈಯ್ಯನ್ನು ಹಗುರ ಮಾಡುವ ಕೆಲಸ ಮಾಡಬೇಕು ಎಂದರು.
ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ, ಕಲೆ, ಸಂಸ್ಕೃತಿ, ಸಾಹಿತ್ಯ ನಮ್ಮನ್ನು ಬೆಳೆಸುತ್ತದೆ. ಚಿಕ್ಕಂದಿನಿಂದಲೇ ಅದನ್ನು ಬೆಳೆಸಿಕೊಳ್ಳಬೇಕು ಎಂದರು.ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷ ಎಂ.ಎನ್. ಹೆಗಡೆಸಂಪೆಕಟ್ಟು ವಹಿಸಿದ್ದರು. ಈ ವೇಳೆ ಕಾರ್ಯಾಧ್ಯಕ್ಷ ಎಂ.ಎನ್. ಹೆಗಡೆ ಸಂಪೆಕಟ್ಟು,, ಉಪಾಧ್ಯಕ್ಷ ಎಂ.ಎಸ್.ಹೆಗಡೆ ಇಟಗುಳಿ, ಕಾರ್ಯದರ್ಶಿ ಹೊಸ್ತೋಟ ಶಾಂತಾರಾಮ ಹೆಗಡೆ, ನಿರ್ದೇಶಕರಾದ ವಿ.ವಿ.ಹೆಗಡೆ ಅತ್ತಿಸರ, ಎಂ.ವಿ.ಹೆಗಡೆ ಅಮಚಿಮನೆ, ಇತರರು ಇದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಚಾರ್ಯ ಡಿ.ಆರ್.ಹೆಗಡೆ ಸ್ವಾಗತಿಸಿದರು.ಉಪನ್ಯಾಸಕ ಅಣ್ಣಪ್ಪ ನಾಯ್ಕ ನಿರ್ವಹಿಸಿದರು. ಪ್ರೌಢ ಶಾಲಾ ಮುಖ್ಯಾಧ್ಯಾಪಕ ಜಿ.ಎ.ಬಂಟ ವಂದಿಸಿದರು. ಇದೇ ವೇಳೆ ವಿದ್ಯಾವಾಚಸ್ಪತಿ ಸ್ವೀಕರಿಸಿದ ಕೆರೇಕೈ ಅವರನ್ನು ಗೌರವಿಸಲಾಯಿತು.