Advertisement
ಇಲ್ಲಿನ ಶಿಲಾ ಶಾಸನಗಳಿಂದ ಹಿಡಿದು ಪತ್ರ ವ್ಯವಹಾರದವರೆಗಿನ ಆಯಾ ಕಾಲ ಮಾನದ ಎಲ್ಲ ದಾಖಲಾತಿ ಗಳು ಒಂದಲ್ಲೊಂದು ಮಹತ್ವದ ಐತಿಹಾಸಿಕ ಸಂಪ ನ್ಮೂಲವೇ ಆಗಿವೆ. ಆದರೆ ದುರ ದೃಷ್ಟವಶಾತ್ ಕರ್ನಾಟಕದ ಐತಿಹಾಸಿಕ ವಿಷಯ ಗಳ ಮೇಲೆ ಪರಿಪೂರ್ಣ ವಾಗಿ ಬೆಳಕು ಚೆಲ್ಲಬಲ್ಲ ಸಾವಿರಾರು ಇಂತಹ ದಾಖಲೆಗಳು ಅಕ್ಕಪಕ್ಕದ ರಾಜ್ಯಗಳ ಗೋದಾ ಮುಗಳಲ್ಲಿ ಕೊಳೆತು ಹೋಗು ತ್ತಿವೆ. ಕೆಲವಷ್ಟನ್ನು ಉದ್ದೇಶ ಪೂರ್ವಕವಾಗಿಯೇ ಗಂಟು ಕಟ್ಟಿ ಮುಚ್ಚಿಡಲಾಗಿದೆ. ಅಖಂಡ ಕರ್ನಾಟಕದ ವಿಚಾರ ಬಂದಾಗ ಹಳೆ ಮೈಸೂರಿನ ಭಾಗದಲ್ಲಿರುವ ದಾಖಲೆಗಳು ಸುರಕ್ಷಿತವಾಗಿ ಸಂರಕ್ಷಣೆಯಾಗಿವೆ. ಇದಕ್ಕೆ ಕಾರಣ ಮೈಸೂರು ಮಹಾರಾಜರ ಜನಪರ ಕಾಳಜಿಯ ಆಳ್ವಿಕೆ. ಆದರೆ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿನ ಐತಿಹಾಸಿಕ ಮಹತ್ವದ ಘಟನಾವಳಿಗಳು ಮತ್ತು ಚಾರಿತ್ರಿಕ ದಾಖಲೆಗಳು ಅಷ್ಟಾಗಿ ರಾಜ್ಯದಲ್ಲಿಯೇ ಉಳಿಯಲಿಲ್ಲ. ಇದಕ್ಕೆ ಪ್ರಮುಖ ಕಾರಣ ಈ ಭಾಗದ ಆಡಳಿತ ವ್ಯವಹಾರವನ್ನು ಅಂದಿನ ಮುಂಬೈ ಪ್ರಸಿಡೆನ್ಸಿ ನೋಡಿಕೊಳ್ಳುತ್ತಿತ್ತು. ಹೀಗಾಗಿ ಈ ಭಾಗದಲ್ಲಿನ ಎಲ್ಲ ದಾಖಲೆಗಳು ಮುಂಬಯಿ, ಪುಣೆ ಮತ್ತು ಕೊಲ್ಲಾಪುರ ಸೇರಿದವು. ಅದರಲ್ಲೂ ಕಿತ್ತೂರು ಚೆನ್ನಮ್ಮ ಮತ್ತು ಅಂತಹದೇ ಸಂಸ್ಥಾನಗಳ ಬಗ್ಗೆ ಇರುವ ಮಹತ್ವದ ದಾಖಲೆಗಳನ್ನು ಇಂಗ್ಲೆಂಡ್ ವಸ್ತು ಸಂಗ್ರಹಾಲಯ ಕ್ಕೆ ಸೇರಿಸಲಾಯಿತು. 150ಕ್ಕೂ ಹೆಚ್ಚು ದೇಸಾಯಿ ಮನೆತನಗಳು, ವಾಡೆ ವ್ಯವಹಾರಗಳು ಸೇರಿದಂತೆ 40 ಸಾವಿರ ದಾಖಲೆಗಳು ಹೊರ ರಾಜ್ಯದಲ್ಲಿವೆ. ಇವುಗಳನ್ನು ಮರಳಿ ತರುವುದಕ್ಕೆ ನಮ್ಮ ಸರಕಾರಗಳು ಕೂಡ ಬರೀ ಆಶ್ವಾಸನೆ ನೀಡಿದ್ದು ಬಿಟ್ಟರೆ ಗಂಭೀರ ಪ್ರಯತ್ನಗಳು ನಡೆದಿಲ್ಲ.
Advertisement
Language, culture; ಕನ್ನಡದ ಕಡತಗಳು ಕರುನಾಡಿಗೆ ಮರಳಲಿ
12:06 AM Nov 28, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.