Advertisement

ವಾಚನಾಲಯಗಳಿಂದ ಭಾಷೆ ಉಳಿಯಲು ಸಾಧ್ಯ

08:00 PM Jan 07, 2021 | Team Udayavani |

ಮುಂಬಯಿ, ಜ. 6: ಹೊರನಾಡ ಕನ್ನಡಿಗರ ಹೆಮ್ಮೆಯ ಸಂಸ್ಥೆ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ನಿರ್ಮಿಸಿಕೊಂಡ ಡೊಂಬಿವಲಿ ಕರ್ನಾಟಕ ಸಂಘದ ಮುಖ್ಯಾಲಯದ ನವೀಕೃತ ವಾಚನಾಲಯದ ಉದ್ಘಾಟನ ಕಾರ್ಯಕ್ರಮವು ಜ. 5ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಹೋಮ ಹಾಗೂ ವಿಶೇಷ ಪೂಜೆ ಸಲ್ಲಿಸುವ ಮುಖಾಂತರ ವಾಚಕರಿಗಾಗಿ ಗ್ರಂಥಾಲಯವನ್ನು ಮುಕ್ತಗೊಳಿಸಲಾಯಿತು. ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಹಾಗೂ ಸುಷ್ಮಾ ಶೆಟ್ಟಿ ದಂಪತಿಯ ಯಜಮಾನಿಕೆಯಲ್ಲಿ ನಡೆದ ಗಣಹೋಮವನ್ನು ವೇ| ಮೂ| ಪಂಡಿತ್‌ ರಾಮಚಂದ್ರ ಭಟ್‌ ಬಾಯರ್‌ ಅವರ ಸಾರಥ್ಯದಲ್ಲಿ ನಡೆಯಿತು.

ಗಣಹೋಮ ಹಾಗೂ ಪೂಜಾಧಿಗಳ ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು, ಪ್ರತಿಯೊಬ್ಬರ ಜ್ಞಾನ ವೃದ್ಧಿಯಾಗಲು ವಾಚನಾಲಯಗಳ ಆವಶ್ಯಕತೆಯಿದೆ. ಆದರೆ ಇಂದಿನ ಮೊಬೈಲ್‌ ಯುಗದಲ್ಲಿ ವಾಚನಾಲಯದಲ್ಲಿ ಓದುಗರ ಸಂಖ್ಯೆ ಕಡಿಮೆ ಆಗುತ್ತಿರುವುದು ವಿಪರ್ಯಾಸದ ಸಂಗತಿ.

ವಾಚನಾಲಯಗಳು ನಮ್ಮ ಜ್ಞಾನವನ್ನು ವೃದ್ಧಿಸುವ ದೇಗುಲಗಳಾಗಿದ್ದು, ವಾಚಕರು ಹೆಚ್ಚಿನ ಸಂಖ್ಯೆಯಲ್ಲಿ ವಾಚನಾಲಯದ ಲಾಭ ಪಡೆಯಬೇಕು. ಡೊಂಬಿವಲಿ ಕರ್ನಾಟಕ ಸಂಘವೂ ನಗರದ ಎರಡು ಭಾಗಗಳಲ್ಲಿ ವಾಚನಾಲಯ ಹೊಂದಿದ್ದು, ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಸಾಹಿತ್ಯದ ಭಂಡಾರವೇ ನಮ್ಮ ವಾಚನಾಯದಲ್ಲಿದೆ.

ಇದನ್ನೂ ಓದಿ:ರಾಜ್ಯ ಮುಖಂಡರ ಜತೆ ಎಐಸಿಸಿ ಉಸ್ತುವಾರಿ ಚರ್ಚೆ

Advertisement

ಸಮಸ್ತ ಕನ್ನಡಿಗರು ವಾಚನಾಲಯಗಳ ಲಾಭ ಪಡೆದು ಅಳಿವಿನ ಅಂಚಿನಲ್ಲಿರುವ ವಾಚನಾಲಯಗಳನ್ನು ಉಳಿಸಿ ಬೆಳೆಸುವುದರಿಂದ ಹೊರನಾಡಿನಲ್ಲಿ ಕನ್ನಡ ಭಾಷೆಗೆ ಪುನ:ಶ್ಚೇತನ ನೀಡಿದಂತಾಗುತ್ತದೆ ಎಂದು ಹೇಳಿ ಶುಭಹಾರೈಸಿದರು.

ಗಣಹೋಮದ ಬಳಿಕ ಗಣ್ಯರು ಮಹಾಪ್ರಸಾದವನ್ನು ಸ್ವೀಕರಿಸಿ ಪುನೀತರಾದರು. ಈ ಸಮಯದಲ್ಲಿ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ, ಉಪಾಧ್ಯಕ್ಷರಾದ ಡಾ| ದಿಲೀಪ್‌ ಕೊಪರ್ಡೆ, ಗೌರವ ಕಾರ್ಯದರ್ಶಿ ದೇವದಾಸ ಕುಲಾಲ್‌, ಕೋಶಾಧಿಕಾರಿ ಲೋಕನಾಥ ಶೆಟ್ಟಿ, ಜತೆ ಕೋಶಾಧಿಕಾರಿ ರಮೇಶ ಕಾಖಂಡಕಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕಾರಿ ಮಂಡಳಿಯ ಸದಸರಾದ ಅಜೀತ ಉಮರಾಣಿ, ಜಗನ್ನಾಥ ಶೆಟ್ಟಿ, ಪ್ರಭಾಕರ ಶೆಟ್ಟಿ, ಗೀತಾ ಮೆಂಡನ್‌, ಮಂಜುನಾಥ್‌ ವಿದ್ಯಾಲಯದ ಮುಖ್ಯ ಶಿಕ್ಷಕ ಆನಂದ ಪಡಸಲಗಿ, ನಾಗಪ್ಪ ಪೂಜಾರಿ, ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷೆ ವಿಮಲಾ ಶೆಟ್ಟಿ ಹಾಗೂ ಸಿಬಂದಿಗಳಾದ ಚಂಚಲಾ ಸಾಲ್ಯಾನ್‌, ಪರಿಮಳಾ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು. ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ಧಾರ್ಮಿಕ ಕಾರ್ಯಕ್ರಮವು ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next