ನವದೆಹಲಿ: ಭೂಕುಸಿತ ಉಂಟಾಗಿ 27 ಮಂದಿ ಮೃತರಾದ ಘಟನೆ ಕೊಲಂಬಿಯಾದ ವಾಯುವ್ಯ ಪ್ರದೇಶದಲ್ಲಿ ಡಿ.4 ( ಭಾನುವಾರ) ನಡೆದಿದೆ ಎಂದು ವರದಿ ತಿಳಿಸಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿದೆ. ಕೊಲಂಬಿಯಾದ ರಾಜಧಾನಿ ಬೊಗೋಟಾದಿಂದ ಸುಮಾರು 230 ಕಿಮೀ ದೂರದಲ್ಲಿರುವ (140 ಮೈಲುಗಳು) ರಿಸಾರಾಲ್ಡಾ ಪ್ರಾಂತ್ಯದ ಪ್ಯೂಬ್ಲೋ ರಿಕೊ ಮತ್ತು ಸಾಂಟಾ ಸಿಸಿಲಿಯಾ ಗ್ರಾಮಗಳ ನಡುವೆ ಭೂಕುಸಿತ ಉಂಟಾಗಿದೆ.
ವರದಿಯ ಪ್ರಕಾರ ಬಸ್‌ವೊಂದರಲ್ಲಿ 25 ಮಂದಿ ಪ್ರಯಣಿಸುತ್ತಿದ್ದರು. ಇದರ ಹಿಂದೆಯೂ ಕೆಲ ವಾಹನಗಳ ಸಂಚಾರಿಸುತ್ತಿದ್ದವು ಏಕಾಏಕಿ ಭೂಕುಸಿತ ಉಂಟಾದ ಪರಿಣಾಮ ಬಸ್ ಮಣ್ಣಿನಡಿಯಲ್ಲಿ ಹೂತು ಹೋಗಿದ್ದು, ಸುಮಾರು 27 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿದು ತಿಳಿಸಿದೆ.
ಘಟನೆ ಬಗ್ಗೆ ಕೊಲಂಬಿಯಾ ಗುಸ್ಟಾವೊ ಪೆಟ್ರೋ ಮಾಹಿತಿ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ರಿಸಾರಾಲ್ಡಾದ ಪ್ಯೂಬ್ಲೊ ರಿಕೊದಲ್ಲಿ ಸಂಭವಿಸಿದ ದುರಂತದಲ್ಲಿ ಮೂವರು ಅಪ್ರಾಪ್ತ ವಯಸ್ಕರು ಸೇರಿದಂತೆ 27 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾನು ದುಃಖದಿಂದ ಘೋಷಿಸುತ್ತಿದ್ದೇನೆ” ಪೆಟ್ರೋ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಸ್ಸಿನಲ್ಲಿದ್ದವರಲ್ಲಿ ಐವರನ್ನು ಜೀವಂತವಾಗಿ ರಕ್ಷಿಸಲಾಗಿದ್ದು,ಮಣ್ಣಿನಡಿ ಸಿಲುಕಿದವರನ್ನು ಹೊರ ತೆಗೆಯುವ ಕಾರ್ಯಚರಣೆ ನಡೆಸಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.