Advertisement

Landslide: ಸಿಕ್ಕಿಂನಲ್ಲಿ ಸಿಲುಕಿರುವ 2,464 ಪ್ರವಾಸಿಗರು

08:18 PM Jun 17, 2023 | Team Udayavani |

ಗ್ಯಾಂಗ್ಟಕ್‌: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಅಲ್ಲಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಉತ್ತರ ಸಿಕ್ಕಿಂ ಜಿಲ್ಲೆಯ ಲಾಚೆನ್‌ ಮತ್ತು ಲಾಚುಂಗ್‌ ಪ್ರದೇಶದಲ್ಲಿ 60 ಮಂದಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 2,400ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಲುಕಿರುವ 2,464 ಪ್ರವಾಸಿಗರು ರಕ್ಷಣೆಗಾಗಿ ಜಿಲ್ಲಾಡಳಿತ 19 ಬಸ್‌ಗಳು ಮತ್ತು 70 ಸಣ್ಣ ವಾಹನಗಳನ್ನು ಕಳುಹಿಸಿದೆ. ಪ್ರಸ್ತುತ ಮೂರು ಬಸ್‌ಗಳು ಮತ್ತು ಎರಡು ಚಿಕ್ಕ ವಾಹನಗಳಲ್ಲಿ 123 ಪ್ರವಾಸಿಗರು ರಾಜಧಾನಿ ಗ್ಯಾಂಗ್ಟಕ್‌ನಿಂದ ಹೊರಟಿದ್ದಾರೆ. ತುರ್ತು ರಕ್ಷಣಾ ತಂಡಗಳು, ಸಿಕ್ಕಿಂ ಪೊಲೀಸ್‌, ಜಿಆರ್‌ಇಎಫ್, ಬಿಆರ್‌ಒ, ಐಟಿಬಿಪಿ, ಭೂಸೇನೆ ಮತ್ತು ಸಿಕ್ಕಿಂ ಪ್ರವಾಸಿ ಸಂಸ್ಥೆಗಳ ಸಂಘವು ಸಿಲುಕಿರುವ ಪ್ರವಾಸಿಗರ ರಕ್ಷಣೆಗಾಗಿ ಶ್ರಮಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

Advertisement

ಇನ್ನೊಂದೆಡೆ, ಚುಂಗ್‌ಥಾಂಗ್‌ಗೆ ಹೋಗುವ ರಸ್ತೆಯ ಅನೇಕ ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಮಳೆ ನಿಂತ ಬಳಿಕವಷ್ಟೇ ಪುನಶ್ಚೇತನ ಕಾಮಗಾರಿ ಆರಂಭವಾಗಲಿದೆ. ಸಿಲುಕಿಕೊಂಡಿರುವ ಪ್ರವಾಸಿಗರ ಕುರಿತ ಯಾವುದೇ ಮಾಹಿತಿಗಾಗಿ ಸಾರ್ವಜನಿಕರು ಸಹಾಯವಾಣಿ 8509822997 ಅಥವಾ 116464265 ಗೆ ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next