Advertisement
ಪೇಜಾವರ ಮಠಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, ಭಾರತದಲ್ಲಿ ಬಾಬರ್ ಹೆಸರಿನಲ್ಲಿ ಯಾವುದೇ ಮಸೀದಿ ರಚನೆಯಾಗುವುದು ಬೇಡ . ನಮ್ಮ ಔದಾರ್ಯವನ್ನು ದೌರ್ಬಲ್ಯವಲ್ಲ. ಪಾಕಿಸ್ಥಾನ, ಬಾಂಗ್ಲಾದೇಶ ಕೊಟ್ಟ ಬಳಿಕ ಇನ್ನು ಮಸೀದಿಗಾಗಿ ಜಾಗವೇಕೆ? ಭಾರತದಲ್ಲಿ ಮೂರು ರಾಷ್ಟ್ರಪತಿಗಳು, ಒಬ್ಬರು ಗೃಹ ಸಚಿವರು, ಒಬ್ಬರು ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರನ್ನಾಗಿ ಮುಸ್ಲಿಮರನ್ನು ಮಾಡಲಿಲ್ಲವೆ? ರಾಜಕಾರಣಿಗಳು ಯಾವತ್ತೂ ಅಧಿಕಾರಕ್ಕಾಗಿಯೇ ವ್ಯವಹರಿಸುತ್ತಾರೆ ಎಂದರು.
ಈ ಹಿಂದೆ ಪಿ.ವಿ. ನರಸಿಂಹ ರಾವ್ ಸರಕಾರವಿದ್ದಾಗ ಇಂತಹುದೇ ರಾಜೀ ಸೂತ್ರಕ್ಕೆ ನೀವು ಸಹಿ ಮಾಡಿದ್ದೀರಿ. ನಾನು ಅದಕ್ಕೆ ಸಹಿ ಮಾಡಿರಲಿಲ್ಲ ಎಂದು ಪೇಜಾವರ ಶ್ರೀಗಳಿಗೆ ತಿಳಿಸಿದರು. ಯೋಗಿ ಆದಿತ್ಯನಾಥ್ ಅವರ ಕುರಿತು ಕೇಳಿದಾಗ, ಅವರು ಯಾರು? ಸಂತರು ಯಾವತ್ತೂ ರಾಜಕೀಯವನ್ನು ಪ್ರವೇಶಿಸಬಾರದು ಎಂದರು. ಶ್ರೀಕೃಷ್ಣ ಮಠಕ್ಕೆ ಭೇಟಿ
ಶ್ರೀ ನಿಶ್ಚಲಾನಂದಸರಸ್ವತೀ ಸ್ವಾಮೀಜಿ ಯವರು ಪೇಜಾವರ ಮಠದಿಂದ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪುರಿ ಸ್ವಾಮೀಜಿಯವರನ್ನು ಸ್ವಾಗತಿಸಿ, ಗೌರವಿಸಿದರು. ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥರು ಪುರಿ ಶ್ರೀಗಳನ್ನು ಗೌರವಿಸಿದರು. ಪುರಿ ಸ್ವಾಮೀಜಿಯವರ ಶಿಷ್ಯ ಶ್ರೀ ನಿರ್ವಿಕಲ್ಪಾನಂದಸರಸ್ವತೀ ಸ್ವಾಮೀಜಿ, ಆಪ್ತ ಕಾರ್ಯದರ್ಶಿ ಪ್ರೇಮಚಂದ್ರ ಝಾ, ಶಾಸಕ ಕೆ. ರಘುಪತಿ ಭಟ್ ಉಪಸ್ಥಿತರಿದ್ದರು.
Related Articles
ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆಯಲ್ಲವೆ ಎಂದು ಪೇಜಾವರ ಶ್ರೀಗಳು ತಿಳಿಸಿದಾಗ, ಸರ್ವೋಚ್ಚ ನ್ಯಾಯಾಲಯಕ್ಕಿಂತ ಸಂಸತ್ ದೊಡ್ಡದಲ್ಲವೆ? ಧಾರ್ಮಿಕ ವಿಷಯದಲ್ಲಿ ಸಂತರ ನಿರ್ಧಾರವೇ ಅಂತಿಮ. ಕೋರ್ಟ್ ಇದರಲ್ಲಿ ಹಸ್ತಕ್ಷೇಪ ನಡೆಸುವುದು ತರವಲ್ಲ. ಬಾಬರ್ ಹೆಸರು ಭಾರತದಲ್ಲಿ ಇರಲೇಬಾರದು. ಒಂದು ಇಂಚು ಭೂಮಿಯೂ ಕೊಡಬಾರದು ಎಂದರು.
Advertisement