Advertisement

ಸಂಪಾಜೆ –ಮಡಿಕೇರಿ ಮಾರ್ಗದಲ್ಲಿ ಮತ್ತೆ ಕುಸಿದ ಗುಡ್ಡ

02:44 PM Aug 13, 2018 | Team Udayavani |

ಸುಳ್ಯ: ಕರಾವಳಿಯಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಂಪಾಜೆ ಘಾಟಿಯಲ್ಲಿ ಮತ್ತೆ  ಗುಡ್ಡ ಕುಸಿದಿದ್ದು, ಸುಳ್ಯ – ಮಡಿಕೇರಿ ರಸ್ತೆಯಲ್ಲಿ ಸೋಮವಾರ ಸಂಚಾರ ಸ್ಥಗಿತಗೊಂಡಿದೆ. 

Advertisement

ಸಂಪಾಜೆ ಪ್ರದೇಶದಲ್ಲಿ ನಿರಂತರ ಗುಡ್ಡ ಕುಸಿದು ರಸ್ತೆಗೆ ಬೀಳುತ್ತಿದೆ. ತಾಳತ್ತಮನೆ ಮತ್ತು ಮಡಿಕೇರಿ ಮಧ್ಯೆ ರಸ್ತೆ ಸಂಪೂರ್ಣ ಕುಸಿದು ಹೋಗಿದೆ. ಈ ಪ್ರದೇಶದಲ್ಲಿ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ.   ಆದರೆ ನಿನ್ನೆ ತಡರಾತ್ರಿಯಿಂದಲೇ ಮದನಾಡಿನಲ್ಲಿ ಗುಡ್ಡ ಕುಸಿದು ರಸ್ತೆಗೆ ಬೀಳುತ್ತಿದೆ . ಇಂದು ಮುಂಜಾನೆ ಅಧಿಕಾರಿಗಳು ಜೆಸಿಬಿ ಮೂಲಕ ರಸ್ತೆಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುತ್ತಿದ್ದಾಗ ಮತ್ತೆ ದೊಡ್ಡ ಮಟ್ಟದಲ್ಲಿ ಗುಡ್ಡ ಕುಸಿಯಲು ಆರಂಭಿಸಿದೆ. 

ಸದ್ಯ ಸುಳ್ಯ – ಮಡಿಕೇರಿ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್  ಆಗಿದ್ದು ರಸ್ತೆಯ ಎರಡೂ ಭಾಗದಲ್ಲಿ ವಾಹನಗಳು ಸಾಲು ಕಟ್ಟಿ ನಿಂತಿವೆ

Advertisement

Udayavani is now on Telegram. Click here to join our channel and stay updated with the latest news.

Next