Advertisement

ಕ್ಷೇತ್ರದ ಜನರೇ ನನಗೆ ದೇವರ ಸಮಾನ: ಹೆಬ್ಬಾಳಕರ

08:52 PM Nov 07, 2020 | Suhan S |

ಬೆಳಗಾವಿ: ಕ್ಷೇತ್ರದ ಜನರ ಆಶೀರ್ವಾದ ಎಲ್ಲಕ್ಕಿಂತ ದೊಡ್ಡದು. ನನಗೆ ಗ್ರಾಮೀಣ ಕ್ಷೇತ್ರದ ಜನರ ಆಶೀರ್ವಾದ ಸಿಕ್ಕಿದೆ. ಇದಕ್ಕಿಂತ ಸುದೈವ ಬೇರೆ ಇಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

Advertisement

ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿಮಸಣಾಯಿ ದೇವಸ್ಥಾನ ಕಟ್ಟಡ ನಿರ್ಮಾಣಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ನನ್ನನ್ನು ಕಳೆದ ಚುನಾವಣೆಯಲ್ಲಿಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗೆಲ್ಲಿಸಿದ್ದೀರಿ. ಮನೆ ಮಗಳಂತೆ ಕಂಡಿದ್ದೀರಿ. ನಿಮ್ಮ ಎದುರು ನಾನು ಸಣ್ಣವಳು. ನೀವೇ ನನಗೆ ದೇವರ ಸಮಾನ. ಕ್ಷೇತ್ರದ ಜನರಲ್ಲೇ ನಾನು ದೇವರನ್ನುಕಾಣುತ್ತೇನೆ. ನಿಮ್ಮ ಆಶೀರ್ವಾದ ಸದಾ ಇರಲಿ ಎಂದರು.

ಕ್ಷೇತ್ರದ ಪ್ರತಿ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ನೆರವು ನೀಡುತ್ತಿದ್ದೇನೆ. ರಸ್ತೆ, ಶಾಲೆಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿದ್ದೇನೆ. ಕುಡಿಯುವ ನೀರಿನ ಸೌಲಭ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಇವೆಲ್ಲ ಜನರ ಬದುಕಿನಲ್ಲಿ ನೆಮ್ಮದಿ ನೀಡುತ್ತವೆ. ಕನಿಷ್ಠ ಅವಶ್ಯಕತೆಗಳನ್ನೂ ಕಲ್ಪಿಸದಿದ್ದರೆ ಜನಪ್ರತಿನಿಧಿ ಗಳು ತಮ್ಮ ಕರ್ತವ್ಯದಿಂದ ಪಲಾಯನ ಮಾಡಿದಂತಾಗುತ್ತದೆ. ನಾನು ಎಂದಿಗೂ ಜನರಿಂದ ದೂರವಾಗುವವಳಲ್ಲ ಎಂದು ನುಡಿದರು.

ಮಸಣಾಯಿ ದೇವಸ್ಥಾನ ಕಮಿಟಿ ಸದಸ್ಯರು, ಗ್ರಾಮದ ಹಿರಿಯರು, ಯುವರಾಜ ಕದಂ, ಶಿವಾಜಿ ಅತಿವಾಡಕರ, ರೇಮಾಣಿ ತರಳೆ, ಶಿವಾಜಿ ರಾಕ್ಷೆ, ಶಂಕರ ತರಳೆ, ರಾಜು ಕೊಚಾರಿ, ಅಮೋಲ್‌ ಭಾತಖಾಂಡೆ, ಭರಮಾ ಮನ್ನೋಳಕರ, ಅರುಣ ಬೆಳಗಾಂವಕರ, ಸಂಜು ತರಳೆ,ದೇವಪ್ಪ ಮನ್ನೋಳಕರ, ಶಿವಾಜಿ ಚೌಗುಲೆ, ಬಾಬು ತರಳೆ, ರಾಜು ತರಳೆ, ಅಶೋಕ ಯಳಗುರಕರ, ಪಿ.ಡಿ. ಕೋಲಕಾರ, ಪರುಶರಾಮ ತರಳೆ, ಮಾರುತಿ ಕಾಕತಕರ ಹಾಗೂ ಭಾಗ್ಯಲಕ್ಷ್ಮೀ ಕೊ-ಆಪ್‌ ಸೊಸೈಟಿ ಮತ್ತು ಯಶ್‌ ಕೋ ಆಪ್‌ ಸೊಸೈಟಿಯ ಎಲ್ಲ ಪದಾ ಧಿಕಾರಿಗಳು, ಸಂಚಾಲಕರು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next