Advertisement

ಕೊಣ್ಣೂರಲ್ಲಿ ದೇಗುಲ ಚೆತ್‌ ನಿರ್ಮಾಣಕ್ಕೆ ಭೂಮಿಪೂಜೆ

03:49 PM Oct 19, 2021 | Shwetha M |

ತಾಳಿಕೋಟೆ: ಕೊಣ್ಣೂರ ಗ್ರಾಮದಲ್ಲಿರುವ ಪುರಾತನ ದೇವಸ್ಥಾನವಾದ ಲಕ್ಕಮ್ಮದೇವಿ ಜೀರ್ಣೋದ್ಧಾರಕ್ಕೆ ಸಿ.ಬಿ. ಅಸ್ಕಿ ಫೌಂಡೇಶನ್‌ ವತಿಯಿಂದ ಅಗತ್ಯವಿರುವ 1 ಲಕ್ಷ ರೂ. ನೆರವು ನೀಡುವುದರೊಂದಿಗೆ ಫೌಂಡೇಶನ್‌ ಅಧ್ಯಕ್ಷ ಸಿ.ಬಿ. ಅಸ್ಕಿ ಚಾಲನೆ ನೀಡಿದರು.

Advertisement

ಸಿ.ಬಿ.ಅಸ್ಕಿ ಅವರು ಈ ಹಿಂದೆ ಕೊಣ್ಣೂರ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರ ಮನವಿ ಮೇರೆಗೆ ದೇವಸ್ಥಾನದ ಮುಂಭಾಗದಲ್ಲಿ ಅಗತ್ಯವಿರುವ ಚೆತ್‌ ನಿರ್ಮಾಣಕ್ಕೆ ತಗಲುವ 1 ಲಕ್ಷ ರೂ. ನೇರವು ನೀಡುವದಾಗಿ ಘೋಷಿಸಿದ್ದರು. ಅದರಂತೆ ಕೊಣ್ಣೂರ ಗ್ರಾಮಕ್ಕೆ ಭೇಟಿ ನೀಡಿ ದೇವಸ್ಥಾನದ ಮುಂಭಾಗ ಚೆತ್‌ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಮಯದಲ್ಲಿ ಮಾತನಾಡಿದ ಅಸ್ಕಿ, ಕೊಣ್ಣೂರ ಅಘಾದವಾದ ಭಕ್ತಿಯ ನೆಲೆಯನ್ನು ಹೊಂದಿರುವ ಲಕ್ಕಮ್ಮದೇವಿ ದೇವಸ್ಥಾನ ಪುರಾತನವಾಗಿದೆ. ಭಕ್ತರ ನೆರವಿನಿಂದ ಈಗಾಗಲೇ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ. ದೇವಸ್ಥಾನದ ಮುಂಭಾಗದ ಮೇಲ್ಛಾವಣೆ ಇಲ್ಲದಿರುವುದನ್ನು ಹಿರಿಯರು ನನ್ನ ಗಮನಕ್ಕೆ ತಂದು ಅದನ್ನು ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಅದನ್ನು ನಿರ್ಮಿಸುವ ಇಚ್ಛೆಯೊಂದಿಗೆ ಫೌಂಡೇಶನ್‌ ನೇತೃತ್ವದಲ್ಲಿ 1 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಈ ಹಿಂದೆ ಗ್ರಾಮದ ಚಿನ್ಮಯಿಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ 3 ಲಕ್ಷ ರೂ. ನೆರವು ನೀಡಲಾಗಿತ್ತು. ಸದರಿ ಕಾರ್ಯವು ಪೂರ್ಣಗೊಂಡಿದೆ ಎಂದ ಅವರು, ಸಿ.ಬಿ. ಅಸ್ಕಿ ಫೌಂಡೇಶನ್‌ ನೇತೃತ್ವದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರ ನೋವು ನಲಿವುಗಳಿಗೆ ಸ್ಪಂದಿಸಬೇಕೆಂಬ ಇಚ್ಛೆಯೊಂದಿಗೆ ಕೆಲಸಗಳನ್ನು ಆರಂಭಿಸಲಾಗಿದೆ.

ಈ ಹಿಂದೆ ಪ್ರತಿ ವರ್ಷ ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳ ಸಹಾಯದ ಮೂಲಕ ಕೊಣ್ಣೂರ ಗ್ರಾಮದ ಸೀಮೆಗೆ ಒಳಪಡುವ ಜಮೀನುಗಳಿಗೆ ಮಾರ್ಚ್‌ ಅಂತ್ಯದ ನಂತರ ಎಲ್ಲ ರೈತರಿಗೆ ರಿಯಾಯಿತಿ ದರದಲ್ಲಿ ಜಮೀನುಗಳನ್ನು ಸ್ವತ್ಛಗೊಳಿಸಿಕೊಡುವಂತಹ ಕಾರ್ಯಗಳನ್ನು ಮಾಡಲಾಗುತ್ತಿತ್ತು.ಆದರೆ ಈ ಭಾರಿ ಕೊರೊನಾ ಕಾರಣದಿಂದ ಕೆಲಸ ಮಾಡಲು ಆಗಲಿಲ್ಲ. ಮುಂದಿನ ದಿನಗಳಲ್ಲಿ ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲಾಗುವದೆಂದು ಹೇಳಿದರು.

Advertisement

ಕೊಣ್ಣೂರ ಗ್ರಾಮದ ಹಿರೇಮಠದ ಶ್ರೀನಾಥಯ್ಯ ಹಿರೇಮಠ ಮಾತನಾಡಿ, ಸಿ.ಬಿ. ಅಸ್ಕಿ ಫೌಂಡೇಶನ್‌ ನೇತೃತ್ವದಲ್ಲಿ ಗ್ರಾಮಸ್ಥರರಿಗೆ ಸಾಕಷ್ಟು ಅನುಕೂಲಗಳಾಗಿವೆ. ಜಾತಿ, ಧರ್ಮ, ಬೇಧ ಭಾವವೆನ್ನದೇ ಎಲ್ಲರೂ ನಮ್ಮವರು ಎಂಬ ನಂಬಿಕೆಯ ಮೇಲೆ ಸಾಕಷ್ಟು ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಸದಾ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸಿ.ಬಿ. ಅಸ್ಕಿ ಅವರು ಪುರಾತನ ದೇವಸ್ಥಾನವಾದ ಚಿನ್ಮಾಯೇಶ್ವರ ದೇವಸ್ಥಾನ ಜಿರ್ಣೋದ್ಧಾರಕ್ಕೆ ನೆರವಿನ ಹಸ್ತವನ್ನು ನೀಡಿ ಅಭಿವೃದ್ಧಿ ಸಹಕರಿಸಿದ್ದಾರೆ. ಅದರಂತೆ ಲಕ್ಕಮ್ಮದೇವಿ ದೇವಸ್ಥಾನಕ್ಕೆ ನೆರವು ನೀಡಿ ಅಭಿವೃದ್ಧಿ ಮುಂದಾಗಿದ್ದಾರೆ. ಇವರ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ ಎಂದರು.

ಮುಖಂಡರುಗಳಾದ ಬಸನಗೌಡ ದ್ಯಾಪುರ, ಈರನಗೌಡ ಯಾಳವಾರ, ರಾಮಣ್ಣ ಮಣೂರ, ಬಸನಗೌಡ ಹಿರೇಗೌಡರ, ಸುಭಾಷ್‌ ಯಾಳವಾರ, ಬಸವರಾಜ ಮಡಿವಾಳರ, ರಾಮನಗೌಡ ನೀರಲಗಿ, ಬಸನಗೌಡ ಅಂಗಡಗೇರಿ, ಅಶೋಕ ಯಾಳವಾರ, ಯಲ್ಲಪ್ಪ ಮಾದರ, ಸಾಹೇಬಗೌಡ ಯಾಳವಾರ, ವೀರೇಶ ಅಸ್ಕಿ, ಗುರುಲಿಂಗ ಏವೂರ, ಇಮಾಮಶ್ಯಾ ಟಕ್ಕಳಕಿ, ಶಬ್ಬೀರ ದೊಡಮನಿ, ಮಡಿವಾಳ ಅಂಬಳನೂರ, ಶಿವರಾಜ್‌ ಯಾಳವಾರ, ಶ್ರೀಶೈಲ ಕಳ್ಳಿಮಠ, ಸಾಬಣ್ಣ ಚಿರಕನ್ನವರ, ಬಾಗಪ್ಪ ಯಡ್ರಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next