Advertisement

ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ

04:20 PM Sep 15, 2020 | Suhan S |

ಇಂಡಿ: ಗ್ರಾಮೀಣ ಪ್ರದೇಶದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಸಲುವಾಗಿ ಗಡಿಭಾಗದ ಝಳಕಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಕ್ಕೆ ಅನುದಾನ ತಂದಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

Advertisement

ತಾಲೂಕಿನ ಝಳಕಿ ಗ್ರಾಮದಲ್ಲಿ 2 ಕೋಟಿ ವೆಚ್ಚದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಝಳಕಿ ಗ್ರಾಮವು ಈ ಗಡಿಭಾಗದಲ್ಲಿ ಶಿಕ್ಷಣದ ಕಾಶಿಯಾಗಿ ಮಾಡಲು ನಾನು ಶ್ರಮಿಸುವೆ. ಈ ಭಾಗದಲ್ಲಿ ಹೆಚ್ಚಿನ ಸೌಕರ್ಯಗಳಿವೆ. ಬಡ ಮಕ್ಕಳಿಗೆ ಕಲಿಯಲು ಈ ಗ್ರಾಮಕ್ಕೆ ಬರಲು ಎಲ್ಲಗ್ರಾಮೀಣ ಊರುಗಳಿಂದ ಸಾರಿಗೆ ವ್ಯವಸ್ಥೆ ಇದೆ. ಆದ ಕಾರಣ ಈ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆ, ಸರಕಾರಿ ಪಿಯು ಕಾಲೇಜ್‌ ಸರಕಾರಿ ಪಾಲಿಟೆಕ್ನಿಕ್‌, ಬಡಮಕ್ಕಳಿಗೆ ವಸತಿ ನಿಲಯ ವ್ಯವಸ್ಥೆ ಝಳಕಿ ಗ್ರಾಮದಲ್ಲಿ ಇದೆ. ಆದ ಕಾರಣ ನಾನು ಈ ಗ್ರಾಮ ದಿಂದ ಗಡಿಭಾಗದಿಂದಲೇಶಿಕ್ಷಣದ ಕ್ರಾಂತಿ ಮಾಡುವೆ ಎಂದರು. ಕೋವಿಡ್‌ -19 ಕೋವಿಡ್ ರೋಗದಿಂದ ವಿದ್ಯಾರ್ಥಿಗಳಿಗೆ ಅನಾನೂಕುಲವಾಗಿದೆ. ಆನ್‌ಲೈನ್‌ ಕ್ಲಾಸ್‌ ಅಷ್ಟು ಸಮರ್ಪಕ ವಾಗುವುದಿಲ್ಲ. ಅದನ್ನು ಅರಿತುಕೊಂಡು ವಿದ್ಯಾರ್ಥಿಗಳು ಸ್ವಲ್ಪ ಹೆಚ್ಚಿನ ಶ್ರಮ ವಹಿಸಿ ತಮ್ಮ ವಿದ್ಯಾಭ್ಯಾಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎಇಇ ಎ.ಎನ್‌. ಮುಲ್ಲಾ, ಎಂಜಿನಿಯರ್‌ ರಾಜೇಶ ಹೂಗಾರ, ಗ್ರಾಪಂ ಮಾಜಿ ಸದಸ್ಯ ರಮೇಶಗೌಡ ಬಿರಾದಾರ, ಪಾಂಡುರಂಗ ಜಾಗಿರದಾರ, ಶಂಕರಗೌಡ ಪಾಟೀಲ, ಬಸುವರಾಜ ಜಾಧವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next