Advertisement

ಗೋಕಾಕ ಆರ್‌ಎಸ್‌ಎಸ್‌ ಕಟ್ಟಡಕ್ಕೆ ಭೂಮಿಪೂಜೆ

12:19 PM Jun 28, 2020 | Suhan S |

ಗೋಕಾಕ: ನಗರದಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂತನ ಕಟ್ಟಡ ತಲೆಯೆತ್ತಲಿದೆ. ಇಲ್ಲಿಯ ರಮೇಶ ಅಣ್ಣಾ ಕಾಲೋನಿಯಲ್ಲಿ ನೂತನ ಕಟ್ಟಡಕ್ಕೆ ಉತ್ತರ ಕರ್ನಾಟಕ ಪ್ರಾಂತ ಸಹ ಪ್ರಚಾರಕ ನರೇಂದ್ರಜಿ ಅವರ ಉಪಸ್ಥಿತಿಯಲ್ಲಿ ಗುದ್ದಲಿ ಪೂಜೆ ನೆರವೇರಿತು.

Advertisement

ವಿರೂಪಾಕ್ಷಿ ಕಲಬುರ್ಗಿ ದಂಪತಿಗಳು, ಹಿರಿಯ ಆರ್‌ಎಸ್‌ಎಸ್‌ ಕಾರ್ಯಕರ್ತ ವಿಠ್ಠಲ ಹಟ್ಟಿ, ನ್ಯಾಯವಾದಿ ಎಮ್‌. ವಾಯ್‌. ಹಾರೂಗೇರಿ ಉಪಸ್ಥಿತಿಯಲ್ಲಿ ಪಾಂಡುರಂಗ ಜೋಶಿ ಪೌರೋಹಿತ್ಯದಲ್ಲಿ ಭೂಮಿ ಪೂಜಾ ಕಾರ್ಯಕ್ರಮ ಜರುಗಿತು.

ನಗರದ ನಾಗಲಿಂಗ ಚಿಪ್ಪಲಕಟ್ಟಿ ನೂತನ ಕಟ್ಟಡಕ್ಕೆ ಆರು ಗುಂಟೆ ಸ್ಥಳ ದಾನ ಮಾಡಿದ್ದರೆ ಪ್ರಥಮ ದರ್ಜೆ ಗುತ್ತಿಗೆದಾರ ರವೀಂದ್ರ ಕಿತ್ತೂರ ಐದು ಲಕ್ಷ, ರಾಜ್ಯಸಭಾ ನೂತನ ಸದಸ್ಯ ಈರಪ್ಪಾ ಕಡಾಡಿ, ಅನೇಕ ಆರ್‌ಎಸ್‌ಎಸ್‌ ಕಾರ್ಯಕರ್ತರು ಸೇರಿದಂತೆ ಹಲವಾರು ಜನರು ಈಗಾಗಲೇ ಸುಮಾರು ಮೂವತ್ತು ಲಕ್ಷ ದೇಣಿಗೆ ನೀಡಿದ್ದು ಒಂದು ವರ್ಷದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಹಿರಿಯ ಆರ್‌ಎಸ್‌ ಎಸ್‌ ಮುಖಂಡರಾದ ಎಮ್‌.ಡಿ. ಚುನಮರಿ, ಲಕ್ಕಪ್ಪಾ ತಹಶೀಲದಾರ, ಲಕ್ಷ್ಮಣ ತಳ್ಳಿ, ಬಸವರಾಜ ಹುಳ್ಳೇರ, ಬಸವರಾಜ ಹಿರೇಮಠ, ಚೂನಪ್ಪಾ ಹಟ್ಟಿ, ವಿಕಾಸ ನಾಯಿಕ, ಯಲ್ಲಪ್ಪಾ ದುರದುಂಡಿ, ರಾಮಚಂದ್ರ ಕಾಕಡೆ, ಮಹಾಂತೇಶ ತಾಂವಶಿ, ಪರಶುರಾಮ ಭಗತ, ರಾಮಚಂದ್ರ ಕದಂ, ಜಗದೀಶ ಸದರಜೋಶಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next