Advertisement
ತಾಲೂಕಿನ ಗಂಡಸಿ ಹೋಬಳಿ ಹೋರಿ ಮಂಗಳಾಪುರದಲ್ಲಿ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ವತಿಯಿಂದ ಜಲ ಜೀವನ್‌ಮಿಷನ್ ಅಡಿ ಪ್ರತಿ ಮನೆಗೆ ಗಂಗೆ ಯೋಜನೆಯಡಿಪ್ರತಿ ಮನೆಗೂ ನೀರು ಒದಗಿಸಲು ನಲ್ಲಿ ಅಳವಡಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಪೆಟ್ರೋಲ್ ಮತ್ತು ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದ್ದು, ಶ್ರೀಸಾಮಾನ್ಯರ ಜೀವನ ತತ್ತರಿಸಿದೆ ಎಂದು ಹೇಳಿದರು.
Related Articles
Advertisement
ಕೆರೆ ಕಟ್ಟೆ ನೀರು: ನನ್ನ ರಾಜಕೀಯ ವಿರೋಧಿಗಳ ಟೀಕೆ, ಟಿಪ್ಪಣಿ ಮತ್ತು ಗಿಮಿಕ್ ರಾಜಕಾರಣಕ್ಕೆ ನಾನುಎಂದಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ, ಕ್ಷೇತ್ರದಮತದಾರರು ನನ್ನ ಮೇಲೆ ಇಟ್ಟಿರುವ ನಂಬಿಕೆ ಹಾಗೂವಿಶ್ವಾಸಕ್ಕೆ ನಾನು ಋಣಿಯಾಗಿದ್ದು, ನನ್ನ ಮುಂದಿನ ಹೋರಾಟ ತಾಲೂಕಿನ ಕೆರೆ ಕಟ್ಟೆಗಳಿಗೆ ನದಿ ನೀರು ತುಂಬಿಸುವುದು ಎಂದು ಹೇಳಿದರು.
ಜನ ಕೈಜೋಡಿಸಬೇಕು: ಅಲ್ಲದೆ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಲ್ಲಿ ಸರ್ಕಾರ ತಾರತಮ್ಯ ಮಾಡಿ, ತಾಲೂಕಿನ ಎರಡು ಕೆರೆಗಳಿಗೆ ನೀರು ನೀಡಿ ಅನ್ಯಾಯ ಮಾಡಲು ಹೊರಟಿದ್ದು, ಬಾಣಾವರ ಹಾಗೂ ಕಣಕಟ್ಟೆ ಹೋಬಳಿ ಕೆರೆ-ಕೆರೆಗಳಿಗೆ ನೀರು ಒದಗಿಸುವವರೆಗೆ ನನ್ನ ಹೋರಾಟ ನಿಲ್ಲದು, ಈ ನನ್ನ ಹೋರಾಟಕ್ಕೆ ತಾಲೂಕಿನ ಜನತೆ ತಮ್ಮ ಜೊತೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೊಂಡೆನಾಳು ಗ್ರಾಪಂ ಅಧ್ಯಕ್ಷ ಹರೀಶ್, ಮುಖಂಡರಾದ ಚಿಕ್ಕಯರಗನಾಳು ಮಲ್ಲೇಶ, ಕೊಂಡೆನಾಳು ರಾಜು, ಹರೀಶ, ಶಂಕರೇಗೌಡ, ಗಂಗಾಧರ ಮತ್ತು ಗ್ರಾಮಸ್ಥರು, ಇಲಾಖೆಯ ಎಂಜಿನಿಯರ್ ಶಿವಾನಂದ, ಭಾಗವಹಿಸಿದ್ದರು.