Advertisement

ಭೂ ಸಂಪತ್ತು ರಕ್ಷಣೆ ಎಲ್ಲರ ಹೊಣೆ

04:49 PM Apr 28, 2022 | Team Udayavani |

ಚಿಕ್ಕಮಗಳೂರು: ಅರಣ್ಯ ಹಾಗೂ ಜಲಸಂಪತ್ತು ನಶಿಸುತ್ತಿದ್ದು, ಮುಂದಿನ ಪೀಳಿಗೆ ಹಿತದೃಷ್ಟಿ ಯಿಂದ ಭೂ ಸಂಪತ್ತು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ. ಅದನ್ನು ಅರಿತು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್. ಸೋಮ ತಿಳಿಸಿದರು.

Advertisement

ತಾಲೂಕು ಮತ್ತಾವರ ಗ್ರಾಮದ ಮಾಹಿತಿ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅರಣ್ಯ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸಂಯುಕ್ತಾಶ್ರಯದಲ್ಲಿ ವಿಶ್ವ ಭೂ ದಿನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಲಯಗಳು ಪರಿಸರ ಸಂರಕ್ಷಣೆಗೆ ಅನೇಕ ನಿರ್ದೇಶನಗಳನ್ನು ನೀಡಿದೆ. ಪರಿಸರ ಸಂರಕ್ಷಣೆ ಕೇವಲ ಕಾನೂನು ಸುಪರ್ದಿಗೆ ಮೀಸಲಿಡುವುದು ಮೂರ್ಖತನ. ಕಾನೂನು ಎಂಬುದು ಸಾಮಾನ್ಯ ಜ್ಞಾನವಾಗಿದ್ದು, ಪ್ರತಿಯೊಬ್ಬರು ಅರಿತು ಭೂ ದಿನವನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿನಿತ್ಯ ಪರಿಸರ ಕಾಳಜಿ ಹೊಂದಬೇಕು ಎಂದರು.

ಮಾನವನಂತೆ ಸಕಲ ಜಿವರಾಶಿಗಳಿಗೂ ಪ್ರಕೃತಿಯಲ್ಲಿ ಜೀವಿಸುವ ಹಕ್ಕಿದೆ. ಸಂವಿಧಾನ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಮೂಲಭೂತ ಕರ್ತವ್ಯ ಎಂದು ಪರಿಗಣಿಸಿದೆ. ಪರಿಸರಕ್ಕೆ ಮಾರಕ ವಾದ ವಸ್ತುಗಳನ್ನು ಬಳಸುವುದನ್ನು ಮಿತಗೊಳಿಸಿ ಪರಿಸರ ಸಂರಕ್ಷಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್‌.ಎಂ. ಸುಧಾಕರ್‌ ಮಾತನಾಡಿ, ಮಾನವ ಆಧುನಿಕ ಜೀವನದಲ್ಲಿ ಪರಿಸರವನ್ನು ಹಾನಿಗೊಳಿಸು ತ್ತಿರುವುದು ದುರದೃಷ್ಟಕರ. ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗುತ್ತಿದು, ಪ್ಲಾಸ್ಟಿಕ್‌ ಬಳಕೆ ಮುಕ್ತ ಅರಿವು ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದರು.

Advertisement

ವಕೀಲ ಎಸ್.ಎಸ್. ವೆಂಕಟೇಶ್‌ ಮಾತನಾಡಿ, ಮಾನವ ಪರಿಸರದಿಂದ ಹಲವು ಲಾಭಗಳನ್ನು ಪಡೆದುಕೊಂಡರೂ, ನಾನೇ ಸಾರ್ವಭೌಮ ಎಂಬ ತಪ್ಪು ಅರಿವು ಬೆಳೆಸಿಕೊಂಡಿದ್ದಾನೆ. ನಾವಿಲ್ಲದೇ ಪರಿಸರ ಇರಬಹುದು, ಪರಿಸರವಿಲ್ಲದೆ ನಾವಿರಲು ಸಾಧ್ಯವಿಲ್ಲ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್‌ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರಣ್ಯ ಇಲಾಖೆ ವೈಜ್ಞಾನಿಕ ಮಾದರಿಗಳನ್ನು ಅನುಸರಿಸುತ್ತಿದ್ದು, ಪರಿಸರಕ್ಕೆ ಪೂರಕವಾದ ಸಸಿಗಳನ್ನು ನೆಡುವ ಕಾರ್ಯ ನಡೆಯುತ್ತಿದೆ. ಸತ್ತ ಕಾಡುಪ್ರಾಣಿಗಳನ್ನು ಸುಡದೆ ಸಹಜ ಸ್ಥಿತಿಯಲ್ಲಿ ಪರಭಕ್ಷಕ ಪ್ರಾಣಿ-ಪಕ್ಷಿಗಳ ಆಹಾರಕ್ಕಾಗಿ ಬಿಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಕೆ.ಬಿ.ನಂದೀಶ್, ವಲಯ ಅರಣ್ಯಾಧಿಕಾರಿ ಎಲ್‌. ಸ್ವಾತಿ, ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಪರಿಸರಾಧಿಕಾರಿ ಎಸ್‌. ಆರ್.ಶ್ವೇತ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next