Advertisement

ನೆಲ-ಜಲ-ಭಾಷೆ ರಕ್ಷಣೆ ಅನಿವಾರ್ಯ

05:53 AM Jan 27, 2019 | Team Udayavani |

ಮೂಡಲಗಿ: ನೆಲ, ಜಲ, ಭಾಷೆಗೆ ಬೇರೆಯವರಿಂದ ಅನ್ಯಾಯವಾಗದಂತೆ ಕಾಪಾಡಿಕೊಳ್ಳಲು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ ಎಂದು ತಹಶೀಲ್ದಾರ್‌ ಮುರಳೀಧರ ತಳ್ಳಿಕೇರಿ ಹೇಳಿದರು.

Advertisement

ಬಸವರಂಗ ಮಂಟಪದಲ್ಲಿ ಪುರಸಭೆಯಿಂದ ಏರ್ಪಡಿಸಿದ್ದ 70ನೇ ಗಣರಾಜೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ತಮ್ಮ ಸಂದೇಶ ವಾಚನದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡದೇ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಅಜಿತ್‌ ಮನ್ನಿಕೇರಿ ಮಾತನಾಡಿ, ಅಂಬೇಡ್ಕರ್‌ ಬರೆದ ಸಂವಿಧಾನ ಅಂಗೀಕಾರವಾದ ದಿನ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕ ದಿನವಾಗಿದ್ದು, 70 ವರ್ಷಗಳಲ್ಲಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಮೂರು ಸಲ ಸಣ್ಣ ಬದಲಾವಣೆಗಳಾಗಿ ದೇಶದ ಜನತೆಗೆ ರಕ್ಷಣೆ, ಭದ್ರತೆ, ಆಶ್ರಯ ದೊರಕಿಸಿಕೊಟ್ಟಿದೆ. ವಿದ್ಯಾರ್ಥಿಗಳು ಸಂವಿಧಾನ ತಿಳಿದುಕೊಂಡು ಸುಭದ್ರ ಭಾರತದ ಬುನಾದಿಯಾಗಬೇಕು ಎಂದರು.

ಸಿಡಿಪಿ ಗುಜನಟ್ಟಿ ಮಾತನಾಡಿ, ಪ್ರಜಾಸತ್ಮಾಕ ರಾಷ್ಟ್ರದಲ್ಲಿಯೇ ಪ್ರಜೆಗಳೇ ರಾಜರು. ಇಂದಿನ ಮಗು ಇಂದೇ ರಾಜನಾಗುವ ಪರಿಸ್ಥಿತಿ ಇದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಎಸ್‌.ಆರ್‌. ಸೋನವಾಲ್ಕರ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಹನೀಯರನ್ನು ಸ್ಮರಿಸಿಕೊಳ್ಳುತ್ತ ಪ್ರಥಮ ಪ್ರಧಾನಿ ನೆಹರು ಅವರ ಅವಧಿಯಲ್ಲಿಯೇ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

Advertisement

ವಿದ್ಯಾರ್ಥಿಗಳಾದ ಶಿಲ್ಪಾ ಕುಂದರಗಿ, ವಾಣಿಶ್ರೀ ಢವಳೇಶ್ವರ, ರೂಪಾ ಕಂಕಣವಾಡಿ ಮಾತನಾಡಿದರು. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂಡಲಗಿ ವಲಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ಪುರಸಭೆ ಮಾಜಿ ಅಧ್ಯಕ್ಷ ಎಸ್‌.ಆರ್‌ ಸೋನವಾಲ್ಕರ ಮತ್ತು 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳಿಗೆ ಎಸ್‌.ಎಸ್‌.ಆರ್‌ ಪ್ರೌಢ ಶಾಲೆ ನಿವೃತ್ತ ಉಪಪ್ರಾಚಾರ್ಯ ಆರ್‌.ಟಿ. ಲಂಕೆಪ್ಪನ್ನವರ ಇಪತ್ತೈದು ಸಾವಿರ ಬಹುಮಾನ ಘೋಷಿಸಿದರು.

ಪುರಸಭೆ ಸದಸ್ಯರಾದ ಆರ್‌.ಡಿ. ಸಣ್ಣಕ್ಕಿ, ಶಿವಾನಂದ ಸಣ್ಣಕ್ಕಿ, ಮಾಜಿ ಸದಸ್ಯ ರಮೇಶ ಸಣ್ಣಕ್ಕಿ, ಕೆ.ಟಿ.ಗಾಣಿಗೇರ, ಉಪತಹಶೀಲ್ದಾರ್‌ ಎಸ್‌.ಎ.ಬಬಲಿ, ರಾಜು ಕಡಕೋಳ, ಪುರಸಭೆ ಮುಖ್ಯಾಧಿಕಾರಿ ಜಿ.ಆರ್‌. ಪೂಜೇರಿ, ದೈಹಿಕ ಶಿಕ್ಷಣಾಕಾರಿ ಎಸ್‌.ಎ. ನಾಡಗೌಡ ಮತ್ತಿತರು ಇದ್ದರು.

ಎಸ್‌.ಎಸ್‌.ಆರ್‌ ಪ್ರೌಢ ಶಾಲೆ, ಕೆ.ಎಚ್.ಸೋನವಾಲ್ಕರ ಸರಕಾರಿ ಪ್ರೌಢ ಶಾಲೆ, ಉಮಾಬಾಯಿ ಪ್ರೌಢ ಶಾಲೆ, ಸರಕಾರಿ ಉರ್ದು ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸರಕಾರಿ ಹೆಣ್ಣು ಮಕ್ಕಳ ಮತ್ತು ಗಂಡು ಮಕ್ಕಳ ಪ್ರಾಥಮಿಕ ಶಾಲೆ, ವಿ.ಬಿ. ಸೋನವಾಲ್ಕರ ಪ್ರೌಢ ಶಾಲೆ, ಅಡಿವುಡಿ ಶಾಲೆ, ಎನ್‌.ಎನ್‌. ಸೋನವಾಲ್ಕರ ಶಾಲೆ, ನವಚೈತನ್ಯ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಜನಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next