Advertisement

ಬದಿಯಡ್ಕ: ಗುಡ್ಡ ಕುಸಿತದ ಭೀತಿ ; ಸಂಚಾರ ನಿಷೇಧ

08:49 AM Jul 25, 2019 | Hari Prasad |

ಬದಿಯಡ್ಕ: ಕಾಸರಗೋಡು ಜಿಲ್ಲೆಯ ಬದಿಯಡ್ಕ ಕರಿಂಬಿಲ ಬಳಿ ಅಂತರ್ ರಾಜ್ಯ ರಸ್ತೆ ಇದೀಗ ಕುಸಿಯುವ ಭೀತಿಯಲ್ಲಿದೆ. ಈ ರಸ್ತೆಯು ಸಾಧಾರಣ ಎರಡು ಅಡಿಯಷ್ಟು ಕುಸಿದಿದ್ದು ಅಲ್ಲಲ್ಲಿ ಬಿರುಕು ಬಿಟ್ಟಿದೆ.

Advertisement

ಇದರ ಒಂದು ಬದಿಯಲ್ಲಿರುವ ಮಣ್ಣಿನ ಗುಡ್ಡವು ಜರಿದು ಬೀಳುತ್ತಿದ್ದು ಯಾವುದೇ ಕ್ಷಣದಲ್ಲಿ ಸಂಪೂರ್ಣವಾಗಿ ಕುಸಿದು ಬೀಳುವ ಭೀತಿ ಎದುರಾಗಿದೆ. ಒಂದುವೇಳೆ ಈ ಗುಡ್ಡ ಕುಸಿದಲ್ಲಿ ರಸ್ತೆಯು ಸಂಪೂರ್ಣ ಕುಸಿದು ಹೋಗಲಿದೆ. ಇದೀಗ ಮುಂಜಾಗರುಕತಾ ಕ್ರಮವಾಗಿ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿಯಿತ್ತು ಈ ರಸ್ತೆಯಲ್ಲಿ ಎಲ್ಲಾ ವಿಧದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.

ಬದಲೀ ಮಾರ್ಗವಾಗಿ ಈ ರಸ್ತೆಯ ಮೂಲಕ ಹಾದುಹೋಗುವ ವಾಹನಗಳನ್ನು ಕನ್ಯಪಾಡಿ –ಯೇಳ್ಕಾನ – ಬಣ್ಪುತ್ತಡ್ಕ- ಉಕ್ಕಿನಡ್ಕ ರಸ್ತೆಯ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.

ಉಕ್ಕಿನಡ್ಕದಿಂದ ಕರಿಂಬಿಲವರೆಗೂ ಸಂಚಾರ ನಿಷೇಧಿಸಿರುವುದರಿಂದ ಈ ಭಾಗದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಜನರು ಕಿಲೋಮೀಟರುಗಳಷ್ಟು ನಡೆದು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next