Advertisement
ಕಂದಕರಾ.ಹೆದ್ದಾರಿ 66ರಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಮರವಂತೆ ಪೇಟಿಯಿಂದ ನಾವುಂದದವರೆಗೆ ಹೊಸದಾಗಿ ನಿರ್ಮಿಸಿರುವ ರಸ್ತೆಯಲ್ಲಿ ವಾಹನಗಳು ಪ್ರಯಾಣಿಸುತ್ತಿವೆ. ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಶ್ರೀ ರಾಮ ಭಜನ ಮಂದಿರ ಸಮೀಪ ಹೆದ್ದಾರಿಯ ಪುಟ್‌ಪಾತ್‌ನ ಮಣ್ಣು ಕುಸಿದು ಕಂದಕ ಉಂಟಾಗಿದೆ.
ರಾಮ ಮಂದಿರದ ಬಳಿಯ ರಾ.ಹೆದ್ದಾರಿಯ ಬದಿಗೆ ತುಂಬಿಸಲಾಗಿರುವ ಮಣ್ಣು ಡಾಮರನ ಅಂಚಿನವರೆಗೆ ಕುಸಿದು ಹೋಗಿರುವುದರಿಂದ ರಸ್ತೆಯ ಪುಟ್‌ಪಾತ್ ಇಲ್ಲವಾಗಿದೆ. ಇದರಿಂದ ಪಾದಚಾರಿಗಳು ಹಾಗೂ ಸೈಕಲ್ ಸವಾರರು ರಸ್ತೆಯ ಮೇಲೆ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಎಚ್ಚರ ಅಗತ್ಯ
ರಸ್ತೆ ಬದಿಯ ಅಂಚು ಇಲ್ಲದಿರುವುದರಿಂದ ವಾಹನಗಳು ಸಂಚರಿಸುವಾಗ ಜಾಗೂರುಕತೆ ವಹಿಸುವುದು ಆವಶ್ಯಕವಾಗಿದೆ. ಇಲ್ಲಿ ಎರಡು ದೊಡ್ಡ ವಾಹನಗಳು ಒಟ್ಟಿಗೆ ಚಲಿಸುವಾಗ ಬೈಕ್ ಸವಾರರು ತೀವ್ರ ಜಾಗೃತರಾಗಿರುವುದು ಅಗತ್ಯ, ಒಂದು ವೇಳೆ ರಸ್ತೆ ಬಿಟ್ಟು ವಾಹನವನ್ನು ಕೆಳಗಿಳಿಸಿದರೆ ಹೊಂಡಕ್ಕೆ ಉರುಳುವ ಪರಿಸ್ಥಿತಿ ಇದೆ.